ಕರಿಂಬಿಲ ಜುಮಾ ಮಸ್ಜಿದ್ ನಲ್ಲಿ ಪೈಗಂಬರ್ ಮುಹಮ್ಮದ್ ನೆಬಿಯವರ ಜನ್ಮ ದಿನಾಚರಣೆ ಈದ್ ಮಿಲಾದ್ ಹಾಗೂ ಮದರಸ ವಿದ್ಯಾರ್ಥಿಗಳ ಫೆಸ್ಟ್ ಹಾಗೂ ವಿಜೃಂಭಣೆಯ ಜಾಥಾ ಕಾರ್ಯಕ್ರಮ ಸೆ. 16 ರಂದು ನಡೆಯಿತು.

ಈದ್ ಮಿಲಾದ್ ಪ್ರಯುಕ್ತ ತರ್ಬಿಯತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳ ಫೆಸ್ಟ್ ಮತ್ತು ವಿವಿಧ ಸ್ಪರ್ಧಾ ಕಾರ್ಯ್ರಮಗಳು ನಡೆಯಿತು.

ಮಸೀದಿ ಆಡಳಿತ ಸಮೀತಿ ಅದ್ಯಕ್ಷರು ಅಬ್ದುಲ್ಲಾ ಕಜೆ ಧ್ವಜಾರೋಹಣ ನೆರವೇರಿಸಿದರು.

ಸ್ಥಳ ಖತೀಬರಾದ ಅನ್ಸಾರ್ ಫಾಲಿಳಿ ಉಸ್ತಾದ್ ದುವಾ ನೆರವೇರಿಸಿದರು

ಮುಂಜಾನೆ 4ಗಂಟೆಗೆ ಮೌಲೂದ್ ಪಾರಾಯಣ ದುವಾ ಮಜ್ಲಿಸ್ ನಡೆದು ಸಾಮೂಹಿಕ ಪ್ರಾರ್ಥನೆ ನಡೆಯಿತು.

ಈದ್ ಮಿಲಾದ್ ಅಂಗವಾಗಿ ಮದರಸ ವಠಾರದಲ್ಲಿ ಜಮಾತ್ ಅದ್ಯಕ್ಷಕರ ದ್ವಜಾರೋಹಣ ನಡೆಯಿತು. ಬಳಿಕ ಮದರಸ ವಠಾರದಿಂದ ನಿ0ತಿಕಲ್ಲೂ, ಎಣ್ಮೂರು ದರ್ಗಾ ಝಿಯಾರತ್ ನಡೆಸಿ ನಂತರ ಎಣ್ಮೂರು, ಮುಚ್ಚಿಲ ಬೀದಿಗಳಲ್ಲಿ ಆಕರ್ಷಕ ಜಾತ ನಡೆಯಿತು.

ರಾತ್ರಿ 7. ಗಂಟೆಗೆ ಸರಿಯಾಗಿ ಮದ್ರಸಾ ವಿದ್ಯಾರ್ಥಿಗಳ ತಾಷೀಮ್ ಇಷ್ಕ್ ಮಿಲಾದ್ ಫೆಸ್ಟ್ ಉದ್ಘಾಟಿಸಲಾಯಿತು ,

ಅನ್ಸಾರ್ ಫಾಲೀಳಿ ಉಸ್ತಾದ್ ದುವಾ ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಜಮಾತ್ ಪ್ರಧಾನ ಕಾರ್ಯದರ್ಶಿ ಶಾಫಿ ನರ್ಲಡ್ಕ ಸ್ವಾಗತಿಸಿದರು , ಮಹಮ್ಮದ್ ಮುಸ್ಲಿಯಾರ್ ಉದ್ಘಾಟಿಸಿದರು , ಇಬ್ರಾಹಿಂ ಸಖಾಫಿ, ಮಹುಮೂದ್ ಸಖಾಫಿ, ಇಸ್ಮಾಯಿಲ್ ಮುಸ್ಲಿಯಾರ್, ಅಬ್ದುಲ್ಲಾ ಕಜೆ , ಅಬ್ಬಾಸ್ ಯು, ನೌಶಾದ್ ಹಿಮಮಿ, ಸಮದ್ ಉಸ್ತಾದ್, ಇಬ್ರಾಹಿಂ ಇಂಜೀರ್, ನೌಫಾಲ್ ಉಸ್ತಾದ್, ಸಾದಿಕ್ ನರ್ಲಡ್ಕ, ಶಿಯಾಬ್ , ರಾಝೀಕ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

 

ಅತ್ಯಾಕರ್ಷಕ ಬುರ್ದಾ ಮತ್ತು ದುವಾದೊಂದಿಗೆ ಕಾರ್ಯಕ್ರಮ ಸಮಾರೋಪ ಗೊಂಡಿತು