ಘಟಪ್ರಭಾ: ನಲ್ಲಾನಟ್ಟಿ ಗ್ರಾಮ ಹಿಂದುಳಿದ ಸಮಾಜದ ವತಿಯಿಂದ ಕೂಡಿದ್ದರು ಸಹ ತಮ್ಮ ಸತತ ಪರಿಶ್ರಮ ಮೂಲಕ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಬೆಳೆಯುವ ಮೂಲಕ ಗ್ರಾಮದ ಮಹಾಲಕ್ಷ್ಮೀದೇವಿ ಆವರಣದಲ್ಲಿ ಹಲವಾರು ದೇವಸ್ಥಾನಗಳನ್ನು ನಿರ್ಮಾಣ ಮಾಡುವ ಮೂಲಕ ತಾಲೂಕಿಗೆ ಮಾದರಿಯಾಗಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಗ್ರಾಮಸ್ಥರ ಕಾರ್ಯವನ್ನು ಶ್ಲಾಘಿಸಿದರು.
ಸೋಮವಾರ ಡಿ-23 ರಂದು ತಾಲೂಕಿನ ನಲ್ಲಾನಟ್ಟಿ ಗ್ರಾಮದ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ನಿರ್ಮಿಸಿರುವ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಗ್ರಾಮದೇವತೆ ಲಕ್ಷ್ಮೀದೇವಿ ದೇವಸ್ಥಾನವನ್ನು ಜಿರ್ಣೋದ್ದಾರ ಮಾಡಿರುವುದು ಈ ಭಾಗದ ಭಕ್ತರಿಗೆ ಅನುಕೂಲವಾಗಲಿದೆ. ಇಂತಹ ಮಹತ್ಕಾರ್ಯಕ್ಕೆ ಗ್ರಾಮದ ಜನರು ಕೈಜೋಡಿಸಿ ಶ್ರದ್ದಾಭಕ್ತಿಯಿಂದ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಿದಾಗ ಮಾತ್ರ ದೇವಸ್ಥಾನದ ಅಭಿವೃದ್ಧಿ ಆಗಲು ಸಾಧ್ಯ ಎಂದರು.
ಗ್ರಾಮದ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ನಲ್ಲಾನಟ್ಟಿ ಗ್ರಾಮವನ್ನು ಸಂಸದರ ಆದರ್ಶ ಗ್ರಾಮವನ್ನಾಗಿಸಲು ರಸ್ತೆ, ಶೌಚಾಲಯ, ಕುಡಿಯುವ ನೀರು, ಶಾಲೆಗಳಿಗೆ ಮೂಲಭೂತ ಸೌಲಭ್ಯ, ದೇವಸ್ಥಾನಗಳ ಅಭಿವೃದ್ದಿಗೆ ನೀಡುತ್ತಿರುವ ಅನುದಾನವನ್ನು ಸದ್ಭಳಿಕೆ ಮಾಡಿಕೊಂಡು ನಲ್ಲಾನಟ್ಟಿ ಗ್ರಾಮವನ್ನು ಜಿಲ್ಲೆಯಲ್ಲಿ ಮಾದರಿ ಗ್ರಾಮವನ್ನಾಗಿ ಮಾಡಲು ಗ್ರಾಮಸ್ಥರ ಸಹಾಯ ಸಹಕಾರ ಅಗತ್ಯವಾಗಿದೆ ಎಂದರು.
ಚಿತ್ರದುರ್ಗ ಭಗೀರಥ ಪೀಠದ ಪ.ಪೂಜ್ಯ ಶ್ರೀ ಪುರುಷೋತ್ತಾನಂದಪುರಿ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಿದ್ದರು. ಪೂಜ್ಯ ಶ್ರೀ ಅಭಿನವ ರರೇಶ್ವರ ಮಹಾಸ್ವಾಮಿಗಳು, ಪೂಜ್ಯ ಶ್ರೀ ನಾಗೇಶ್ವರ ಮಹಾಸ್ವಾಮಿಗಳು, ಪೂಜ್ಯ ಶ್ರೀ ನಿಜಗುಣ ದೇವರು, ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ರಂಗಪ್ಪ ಕುಳ್ಳೂರ, ಶಂಕರ ಜಾಗನೂರ, ಅಡಿವೆಪ್ಪ ಬಿಲಕುಂದಿ, ಮಾರುತಿ ಮೆಳವಂಕಿ, ಮಲ್ಲಪ್ಪ ಪೂಜೇರಿ, ಹಣಮಂತ ಪಾಟೀಲ, ರಾಮಚಂದ್ರ ಕುಳ್ಳೂರ, ಲಗಮಣ್ಣಾ ಕುಳ್ಳೂರ, ರಾಮಪ್ಪ ಪೂಜೇರಿ, ಭೀಮಪ್ಪ ಪಾಟೀಲ, ಪ್ರಕಾಶ ಜಾಗನೂರ, ಮುದಕಪ್ಪ ಗದಾಡಿ ಸ್ಥಳೀಯ ಮುಖಂಡರು ಸೇರಿದಂತೆ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.