ಬೆಳಗಾವಿ :
ಖಾನಾಪುರ ತಾಲೂಕಿನ ಲಕ್ಕೆಬೈಲ್ ಗ್ರಾಮದಲ್ಲಿ ವಿದ್ಯುತ್ ತಂತಿ ಮನೆಗೆ ಸ್ಪರ್ಶಿಸಿ ಮನೆ ಸುಟ್ಟು ಹೋಗಿದೆ.
ಮನೆಯ ಮೇಲಿನಿಂದ ಹಾದುಹೋಗಿರುವ ವಿದ್ಯುತ್ ತಂತಿ ಮನೆಗೆ ಸ್ಪರ್ಶಿಸಿದೆ. ಇದರಿಂದ ಧಗಧಗನೇ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ನಂದಿಸಲು ಗ್ರಾಮಸ್ಥರು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೂ ಅಷ್ಟರೊಳಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಹಳೆಯ ಕಾಲದ ಕಟ್ಟಿಗೆ ಮನೆ ಇದಾದ್ದರಿಂದ ಬೆಂಕಿಯ ಕೆನ್ನಾಲಿಗೆ ಬಹಳ ವೇಗವಾಗಿ ವ್ಯಾಪಿಸಿದೆ. ಅಪಾರ ಪ್ರಮಾಣದ ಹಾನಿ ಆಗಿದೆ.