ಬೆಂಗಳೂರು :
ತಮ್ಮ ಜನ್ಮದಿನಕ್ಕೆ ಶುಭ ಕೋರಿ ಬ್ಯಾನರ್ ಕಟ್ಟುವ ಸಂದರ್ಭದಲ್ಲಿ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೂವರು ಯುವಕರು ಪ್ರಾಣ ಕಳೆದುಕೊಂಡ ಘಟನೆಯಿಂದ ಚಿತ್ರನಟ ಯಶ್ ಬೇಸರಗೊಂಡಿದ್ದಾರೆ. ಕೊನೆಗೂ ಅವರು ಮೃತ ಅಭಿಮಾನಿಗಳ ಕುಟುಂಬಕ್ಕೆ ಸಂತೈಸಲು ಆಗಮಿಸಿದ್ದಾರೆ.

ಸದ್ಯ ಶೂಟಿಂಗ್ ನಿಮಿತ್ತ ವಿದೇಶದಲ್ಲಿದ್ದ ಅವರು ಇಂದು ರಾಜ್ಯಕ್ಕೆ ಮರಳಿದ್ದು ನೇರವಾಗಿ ಸೂರಣಗಿ ಗ್ರಾಮದ ಮೃತ ಯುವಕರ ಮನೆಗಳಿಗೆ ಭೇಟಿ ನೀಡಿದ್ದಾರೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಮೂವರು ಯುವಕರು ರವಿವಾರ ಮಧ್ಯರಾತ್ರಿ ಯಶ್ ಜನ್ಮದಿನ ಆಚರಣೆಗೆ ಕಟೌಟ್ ಕಟ್ಟುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದರು.