ಎಡಪದವು :ಸ್ಥಳೀಯ ಎಡಪದವು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸಂಸತ್ತು ಮತ್ತು ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ
ದಿನಾಂಕ 20-6-26 ರಂದು ನಡೆಯಿತು.
ಮಂಗಳೂರಿನ ಖ್ಯಾತ ಉದ್ಯಮಿ, ಕಾನೂನು ಪದವೀಧರರು, ಅನೇಕ ಸಂಘ ಸಂಸ್ಥೆಗಳ ಅಧ್ಯಕ್ಷರು, ಸೇವಾ ಧುರೀಣರಾದ ಬಜ್ಪೆ ಕೈಕಂಬದ ಅವರ್ ಲೇಡಿ ಒಫ್ ಪೊಂಪೈ ಪ್ರೌಢಶಾಲಾ ಸಂಚಾಲಕ ವಾಲ್ಟರ್ ಸ್ಟೀಫನ್ ಮೆಂಡಿಸ್ ಮುಖ್ಯ ಅತಿಥಿಗಳಾಗಿದ್ದರು.
ಪ್ರೌಢ ಶಾಲಾ ವಿಭಾಗದ ಕಲಾ ಸಂಘ, ವಿಜ್ಞಾನ ಸಂಘ,
ಮಕ್ಕಳ ಹಕ್ಕು ಸಂಘ, ಪರಿಸರ ಸಂಘ ಮತದಾರ ಸಾಕ್ಷರ ಸಂಘ
ಕ್ರೀಡಾ ಸಂಘಗಳು ಹಾಗೂ ವಿದ್ಯಾರ್ಥಿ ಸಂಸತ್ತು, ಪದವೀ ಪೂರ್ವ ವಿಭಾಗದ ವಿದ್ಯಾರ್ಥಿ ಸಂಘಗಳನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿ ಇದೇ ಸಂಸ್ಥೆಯಲ್ಲಿ ತನ್ನ ನಲವತ್ತು ವರ್ಷಗಳ ಹಿಂದಿನ ನೆನಪನ್ನು ಮೆಲುಕು ಹಾಕಿ ವಿದ್ಯಾರ್ಥಿಗಳು ಸದಾ ಪರಿಶ್ರಮ ಶಿಸ್ತು ತ್ಯಾಗ ಮನೋಭಾವನೆಯಿಂದ ವಿದ್ಯೆಯನ್ನು ಆರ್ಜಿಸಿ ಹೆತ್ತವರ ಕಾಳಜಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಾಗ ಬದುಕಿಗೊಂದು ಅರ್ಥವೆಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಅಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿಗಳೂ ದೈಹಿಕ ಶಿಕ್ಷಣ ನಿರ್ದೇಶಕ ಕಾವು ಪ್ರೇಮನಾಥ್ ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಹಾಗೂ ಶೈಕ್ಷಣಿಕ ಪ್ರಗತಿಗೆ ಸಂಘ ಚಟುವಟಿಕೆಗಳು ಸದಾ ಪ್ರೇರಕ ಶಕ್ತಿಯಾಗಿರುತ್ತದೆ. ಮಕ್ಕಳು ಆಸಕ್ತಿಯಿಂದ ಶಿಸ್ತಿನಿಂದ ಅಳವಡಿಸಿಕೊಂಡಾಗ ಇಂಥ ಕಾರ್ಯಕ್ರಮಗಳು ಸಾರ್ಥಕವಾಗುತ್ತವೆ ಎಂದು ಅಭಿಪ್ರಾಯ ಪಟ್ಟರು.
ಮಮತಾ ಸ್ವಾಗತಿಸಿದರು
ಅಪರ್ಣಾ ಅತಿಥಿಗಳ ಪರಿಚಯ ಮಾಡಿದರು.
ಪ್ರಾಂಶುಪಾಲೆ ಗಾಯತ್ರಿ ಪ್ರಭು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಮುಖ್ಯ ಶಿಕ್ಷಕ ವಾಸು. ಕೆ ಪ್ರಾಸ್ತಾವಿಕ ಮಾತುಗಳನ್ನಾಡಿ ವಿವಿಧ ಸಂಘಗಳ ಪರಿಚಯ ನೀಡಿದರು.ಕಾಲೇಜು ವಿಭಾಗದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಜ್ವಲ್, ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸಂಸತ್ತಿನ ಮುಖ್ಯಮಂತ್ರಿ ಸೂರಜ್ ತಮ್ಮ ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಸೇವೆ ಮಾಡಲು ಅವಕಾಶವಿತ್ತುದಕ್ಕೆ ಸರ್ವರನ್ನು ಜ್ಞಾಪಿಸಿಕೊಂಡರು.
ರೇಣುಕಾ ಗಾಯತ್ರಿ ನಿರೂಪಿಸಿದರು. ಅನ್ವಿತಾ ವಿ. ಕೆ. ವಂದಿಸಿದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Udaya Prabha > State News > ಎಡಪದವು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸಂಸತ್ತು ಮತ್ತು ವಿವಿಧ ಸಂಘಗಳ ಉದ್ಘಾಟನೆ
ಎಡಪದವು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸಂಸತ್ತು ಮತ್ತು ವಿವಿಧ ಸಂಘಗಳ ಉದ್ಘಾಟನೆ
Team Udayaprabha21/07/2026
posted on

the authorTeam Udayaprabha
All posts byTeam Udayaprabha
Leave a reply

,
,


















