This is the title of the web page
This is the title of the web page

Live Stream

March 2023
S M T W T F S
 1234
567891011
12131415161718
19202122232425
262728293031  

| Latest Version 9.4.1 |

About Us

Join The Telegram Join The WhatsApp

ಮನದ ಮಾತು

ಸುಂದರ ಭೂಮಿ, ನಿಷ್ಕಲ್ಮಶ ಜಗತ್ತು. ಜನಿಸುವ ಪ್ರತಿ ಜೀವಿಗೂ ಅವನ ಸ್ಪರ್ಶದ ಅವಶ್ಯಕತೆ ಇರುತ್ತದೆ. ಸಕಲ ಜೀವಿಗಳ ಜೀವಶಕ್ತಿಯಾಗಿರುವ ಅವನ ಕಾರ್ಯ ಬಹಳ ವಿಶಿಷ್ಟ.

ಹಸಿರಿಗೆ ಉಸಿರ ತುಂಬಿ, ಆ ಉಸಿರಲೇ ಭವ ಬಂಧನವ ತುಂಬಿದವನು. ಯಾರಿವನು..??
ಇನ್ಯಾರು ನಾವು ಪ್ರತಿದಿನ ಸುತ್ತು ಹಾಕುತ್ತಿರುವ, ನಮಗೆ ಬೆಳಕು, ಬದುಕು ನೀಡುತ್ತಿರುವ ಆ ರವಿ… ಆ ಸೂರ್ಯನಿಗೂ ಅವನ ದಿವ್ಯ ಪ್ರಭೆಗು ಸದಾ ಚಿರಋಣಿ…

ಹೇಗೆ ರವಿಯ ಉದಯವು ಜಗಕೆ ಮುಖ್ಯವೋ ಹಾಗೆಯೇ ಅವನ ನಿಷ್ಕಲ್ಮಶ ಕರ್ತವ್ಯವನ್ನು ನಮ್ಮ ಕರ್ತವ್ಯವಾಗಿ ಮಾಡಿಕೊಂಡು ಕನ್ನಡನಾಡಿನ ಜನತೆಗೆ ವೈವಿಧ್ಯಮಯ, ಸ್ವಾರಸ್ಯಕರ, ಸತ್ಯ, ನಿರ್ಭೀತ, ನ್ಯಾಯ ಪರ, ಜನತೆಯ ನೈಜ ಸಮಸ್ಯೆಗಳ ಪರ, ಸಾಧಕರ, ಬಡವರ, ದೀನ-ದಲಿತರ, ನೊಂದವರ ಪರವಾದ,ತಾರತಮ್ಯ ರಹಿತ, ಸತ್ಯ, ತಾಜಾ ಸುದ್ದಿಗಳ ಪ್ರಭೆಯನ್ನು ಓದುಗರ ಮನಸ್ಸಿಗೆ ಮುಟ್ಟಿಸಬೇಕು ಎಂಬ ಪ್ರಾಮಾಣಿಕ ಪ್ರಯತ್ನದೊಂದಿಗೆ ಉದಯಿಸಿದೆ.

ಉದಯಪ್ರಭ ಕನ್ನಡ ಡಿಜಿಟಲ್‌ ದಿನ ಪತ್ರಿಕೆಯಾಗಿದ್ದು ನಾವು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಕಾರ್ಯ ನಿರ್ವಹಿಸುವ ಇಚ್ಛೆ ಹೊಂದಿದ್ದೇವೆ. ನಾವು ಒಳ್ಳೆಯ ಕಾರ್ಯ ಬೆಂಬಲಿಸಿ, ಪ್ರೇೂತ್ಸಾಹಿಸಿ, ಸಮಾಜ ವಿರೋಧಿ ಕಾರ್ಯವನ್ನು ವಿರೋಧಿಸುವ ಆಶಯ ಹೊಂದಿದ್ದೇವೆ.

ಈ ನಮ್ಮ ಪ್ರಯತ್ನಕ್ಕೆ ತಮ್ಮೆಲ್ಲರ ಸಹಕಾರ, ಬೆಂಬಲ, ಆಶೀರ್ವಾದಗಳ ಅವಶ್ಯಕತೆ ಬಹಳ ಇದೆ. ಹಾಗೆ ನಿಮ್ಮ ಸಲಹೆ, ಸೂಚನೆಗಳನ್ನು ಸದಾ ನಾವು ಮುಕ್ತ ಮನಸ್ಸಿನಿಂದ ಸ್ವೀಕರಿಸುವೆವು. ಉತ್ತಮ ವಿಚಾರಗಳು ಎಲ್ಲಾ ಕಡೆಗಳಿಂದಲೂ ಹರಿದು ಬರಲಿ ಎಂಬ ಆಶಯ ನಮ್ಮದು.

ಯುುವ ಪತ್ರಕರ್ತ, ಲೇಖಕ, ಸಾಮಾಜಿಕ ಕಾರ್ಯಕರ್ತ, ಮಾನವತಾವಾದಿ, ಪ್ರಗತಿಪರ ಕೃಷಿಕ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ ಉದಯ ಶಾಂತಿನಾಥ ತೇರದಾಳ (MA, LLB, DCTTC) ಅವರ ಸಾರಥ್ಯದಲ್ಲಿ ಉದಯಪ್ರಭ ಮೂಡಿ ಬರಲಿದೆ.

 

Join The Telegram Join The WhatsApp