ಬಿಹಾರದಲ್ಲಿ ಮತ್ತೆ ಎನ್ಡಿಎ ಸರ್ಕಾರ ಮರಳಲಿದೆ. ಜೆಡಿಯು ಮಹಾಮೈತ್ರಿಕೂಟದಿಂದ ಬೇರ್ಪಟ್ಟಿದ್ದು, ಬಿಜೆಪಿ ಜತೆಗೂಡಿಸರ್ಕಾರ ರಚಿಸಲಿದೆ. ಇಂದು ಸಂಜೆ ರಾಜಭವನದಲ್ಲಿ ನಿತೀಶ್ ಕುಮಾರ್ 9ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ನಿತೀಶ್ ಕುಮಾರ್ ಜತೆಗೆ 2 ಉಪಮುಖ್ಯಮಂತ್ರಿಗಳು ಮತ್ತು 6 ಕ್ಯಾಬಿನೆಟ್ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಬಿಜೆಪಿಯಿಂದ ಸಾಮ್ರಾಟ್ ಚೌಧರಿ,ವಿಜಯ್ ಕುಮಾರ್ ಸಿನ್ಹಾ ಮತ್ತು ಡಾ. ಪ್ರೇಮ್ ಕುಮಾರ್, ಜೆಡಿಯುನಿಂದ ವಿಜಯ್ ಚೌಧರಿ, ವಿಜೇಂದ್ರ ಯಾದವ್ ಮತ್ತು ಶ್ರವಣ್ ಕುಮಾರ್, HAMನಿಂದ ಜಿತಿನ್ ರಾಮ್ ಮಾಂಝಿ ಅವರ ಪುತ್ರ ಸಂತೋಷ್ ಕುಮಾರ್ ಸುಮನ್ ಮತ್ತು ಸ್ವತಂತ್ರ ಅಭ್ಯರ್ಥಿ ಸುಮಿತ್ ಸಿಂಗ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಿತೀಶ್ ಕುಮಾರ್ ಅವರು ರಾಜ್ಯಪಾಲರಿಗೆ ಬೆಂಬಲ ಸೂಚಿಸುತ್ತಿರುವ ಪತ್ರವನ್ನು ಹಸ್ತಾಂತರಿಸುತ್ತಿರುವ ಚಿತ್ರವನ್ನು ಬಿಹಾರ ಬಿಜೆಪಿ ಉಸ್ತುವಾರಿ ವಿನೋದ್ ತಾವ್ಡೆ ಟ್ವೀಟ್ ಮಾಡಿದ್ದಾರೆ.