ಬೆಳಗಾವಿ :
ವಯೋವೃದ್ದರ ಆರೈಕೆಗಾಗಿ ಹೋಮ್ ನರ್ಸಿಂಗ್ ಕೆಲಸ ಮಾಡುತ್ತ ಅನ್ನ ನೀಡುತ್ತಿದ್ದ ಮಾಲಿಕರ ಮನೆಯಲ್ಲಿನ ವಜ್ರ ಮತ್ತು ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದ ಮಹಿಳೆಯನ್ನು ಬಂಧಿಸಿರುವ ಬೆಳಗಾವಿಯ ಕ್ಯಾಂಪ್ ಪೊಲೀಸರು ಬಂಧಿತ ಮಹಿಳೆಯಿಂದ 12.31 ಲಕ್ಷ ಮೌಲ್ಯದ ವಜ್ರ ಮತ್ತು ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀದೇವಿ ಪ್ರಕಾಶ ಮಾಳಗಿ (ಉದ್ಯೋಗ:ಹೋಮ್ ನರ್ಸಿಂಗ್) ಸಾ : ಸುಲದಾಳ, ಹಾಲಿ:ಕಾಕತಿ ಬಂಧಿತ ಆರೋಪಿತಳಾಗಿದ್ದಾರೆ. ಬಂಧಿತಳು ಬೆಳಗಾವಿಯ ಕ್ಯಾಂಪ್ ಪ್ರದೇಶದ ರುಕ್ಸಾನಾ ಜಾಲ ನಾಂಜಿ ಎನ್ನುವವರ ಮನೆಯಲ್ಲಿ ಕಳೆದ ಒಂದು ತಿಂಗಳಿನಿAದ ವಯೋವೃದ್ದರಾಗಿರುವ ತಾಯಿಯ (ಹೋಮ್ ನರ್ಸಿಂಗ್) ಆರೈಕೆ ಮಾಡುವ ಕೆಲಸ ನಿರ್ವಹಿಸುತ್ತಿದ್ದಳು.
ಆದರೆ ಜನೆವರಿ ದಿ. 5ರಂದು ಸದರಿ ಕೆಲಸದಾಕೆ ಸುಮಾರು 12,31,000 ರೂ ಕಿಮ್ಮತ್ತಿನ ಬಂಗಾರದ ಹಾಗೂ ವಜ್ರದ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಸಂಶಯ ಇದೆ ಎಂದು ಮನೆಯ ಮಾಲಿಕರು ನಗರದ ಕ್ಯಾಂಪ್ ಪೊಲೀಸರಿಗೆ ದೂರು ನೀಡಿದ್ದರು. ಮನೆಯ ಮಾಲಿಕರು ನೀಡಿದ ದೂರಿನನ್ವಯ ಕ್ಯಾಂಪ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ.15/2024 ಕಲಂ. 381 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿತ್ತು.
ಪೊಲೀಸ ಆಯುಕ್ತರ ಹಾಗೂ ಉಪ ಪೊಲೀಸ ಆಯುಕ್ತರ ಮಾರ್ಗದರ್ಶನದಂತೆ ಕ್ಯಾಂಪ್ ಪೊಲೀಸ ಠಾಣೆಯ ಇನ್ಸಪೆಕ್ಟರ್ ಅಲ್ತಾಪ್, ಎಮ್ ಹಾಗೂ ಅವರ ಸಿಬ್ಬಂದಿಯವರು ಆರೋಪಿತಳಾದ ಶ್ರೀದೇವಿ ಪ್ರಕಾಶ ಮಾಳಗಿ ಇವಳನ್ನು ಫೆ. ದಿ. 6ರಂದು ವಶಕ್ಕೆ ಪಡೆದುಕೊಂಡು ತಮ್ಮದೇಯಾದ ರೀತಿಯಲ್ಲಿ ವಿಚಾರಣೆ ಮಾಡಿದಾಗ ಬಂಧಿತಳು ಕೆಲಕ್ಕೆ ಇದ್ದ ಮನೆಯಲ್ಲಿ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾಳೆ. ಬಳಿಕ ಬಂಧಿತಳಿAದ 175 ಗ್ರಾಂ ಬಂಗಾರದ ಆಭರಣಗಳು ಹಾಗೂ 50 ಗ್ರಾಂ ಬೆಳ್ಳಿಯ ಆಭರಣ ಹೀಗೆ ಒಟ್ಟು 12,31,000 ರೂಪಾಯಿ ಮೌಲ್ಯದ ಕಳ್ಳತನ ಮಾಡಿದ್ದ ಸಾಮಗ್ರಿಗಳನ್ನು ವಶಪಡಿಕೊಂಡಿದ್ದಾರೆ.
ಆರೋಪಿತಳನ್ನು ವಶಕ್ಕೆ ಪಡೆದು ಆಭರಣಗಳನ್ನು ಜಪ್ತಪಡಿಸಿಕೊಂಡ ಕ್ಯಾಂಪ್ ಪಿಐ ಅಲ್ತಾಪ ಮುಲ್ಲಾ ಹಾಗೂ ತಂಡದ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತ ಎಸ್. ಎನ್. ಸಿದ್ದರಾಮಪ್ಪ ಅವರು ಶ್ಲಾಘಿಸಿ, ತಂಡಕ್ಕೆ ರೂ.10 ಸಾವಿರ ಬಹುಮಾನವನ್ನು ಘೋಷಿಸಿದ್ದಾರೆ.