ಸಂಕೇಶ್ವರ : ಅಕ್ಕ ಪಕ್ಕದ ಮನೆಗಳಿಗೇಲ್ಲ ಬೀಗ ಹಾಕಿದ ಖದೀಮರು ನಿವೃತ್ತ ಶಿಕ್ಷಕಿಯ ಮನೆಯಲ್ಲಿದ್ದ 70 ಗ್ತಾಂ ಚಿನ್ನಾಭರಣ ಹಾಗೂ 1.20 ಲಕ್ಷ ನಗದು ಹಣವನ್ನು ದೋಚಿರುವ ಘಟನೆ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದಲ್ಲಿ ರವಿವಾರ ತಡರಾತ್ರಿ ನಡೆದಿದೆ.
ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದಲ್ಲಿ ರವಿವಾರ ತಡರಾತ್ರಿ ಖದೀಮರ ತಂಡವು ಅಕ್ಕ ಪಕ್ಕದ ಮನೆಗಳಿಗೆ ಕೀಲಿ ಹಾಕಿ ನಿವೃತ್ತ ಶಿಕ್ಷಕಿ ಆಶಾ ಮೋಹಿತೆ ಎಂಬುವರ ಮನೆಗೆ ಹಾಕಲಾಗಿದ್ದ ಬೀಗ ಮುರಿದು ಮನೆಯಲ್ಲಿನ ಅಲೇಮಾರಿನಲ್ಲಿ ಇರಿಸಲಾಗಿದ್ದ ಸುಮಾರು 70 ಗ್ರಾಂ (7 ತೋಲಿ) ಚಿನ್ನಾಭರಣ ಹಾಗೂ 1.20 ಲಕ್ಷ ನಗದು ಹಣವನ್ನು ದೋಚಿ ಫರಾರಿಯಾಗಿದ್ದಾರೆ.
ಸುದ್ದಿ ತಿಳಿದ ಸಂಕೇಶ್ವರ ಪೊಲೀಸ್ ರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನ ದಳವನ್ನು ಸ್ಥಳಕ್ಕೆ ಕರೆತಂದು ಖದೀಮರ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.