VTU 23 ನೇ ಘಟಿಕೋತ್ಸವ (ಭಾಗ-೨) ಸಮಯದಲ್ಲಿ ಎಂ.ಬಿ.ಎ.೪೫೧೪, ಎಂ.ಸಿ.ಎ.೪೦೨೪, ಎಂ.ಟೆಕ್ ೯೨೦, ಎಂ.ಆರ್ಚ ೪೪, ಎಂ.ಪ್ಲಾನ್ ೨೭, ಹಾಗೂ ಸಂಶೋಧನಾ ಪದವಿಗಳಾದ ಪಿ.ಎಚ್.ಡಿ ೬೬೭, ಎಂ.ಎಸ್ಸಿ (ಎಂಜಿನಿಯರಿಂಗ್‌)-೦೨, ಹಾಗೂ ಇಂಟಿಗ್ರೇಟೆಡ್ ಡುಯಲ್ ಡಿಗ್ರಿ ಟು ರಿಸರ್ಚ ೨ ಪದವಿಗಳನ್ನು ನೀಡಲಾಗುತ್ತಿದೆ ಎಂದರು.
ಚಿನ್ನದ ಪದಕ ವಿಜೇತರು: ಬೆಂಗಳೂರಿನ ಆಯ್.ಸಿ.ಎಂ.ಆರ್ ಇನ್ಸಟಿಟ್ಯೂಟ್ನ ತನು ಜಿ ೪, ಹುಬ್ಬಳ್ಳಿಯ ಕೆ.ಎಲ್.ಇ. ಇನ್ಸಟ್ಯೂಟ್ ಆಫ್ ಟೆಕ್ನಾಲಾಜಿಯ ಅಕ್ಷತಾ ಎಸ್. ನಾಯ್ಕ ೩, ದಾವಣಗೆರೆಯ ಪೂಜಾ ಎಂ. -೩, ಬೆಳಗಾವಿ ಎಸ್.ಜಿ.ಬಾಳೇಕುಂದ್ರಿ ಇನ್ಸಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಕ್ರಾಂತಿ ಉತ್ತಮ ಮೋರೆ-೨, ಚಿಕ್ಕಮಗಳೂರು ಆದಿಚುಂಚನಗಿರಿ ಇನ್ಸಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಚೇತನ ಎಚ್.ಪಿ,-೨, ಹಾಗೂ ದಾವಣಗರೆಯ ಯು.ಬಿ.ಡಿ.ಟಿ ಕಾಲೇಜಿನ ನಿತ್ಯಾ ಎ.ಎಸ್-೨ ಸೇರಿದಂತೆ ಒಟ್ಟು ೧೬ ಚಿನ್ನದ ಪದಕಗಳನ್ನು ವಿತರಿಸಲಾಗುವುದು ಎಂದು ಕುಲಪತಿ ವಿದ್ಯಾಶಂಕರ ತಿಳಿಸಿದರು.

ಬೆಳಗಾವಿ :
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ತನ್ನ 23ನೇ ವಾರ್ಷಿಕ ಘಟಕೋತ್ಸವವನ್ನು ಮಾರ್ಚ್ 7ರಂದು ವಿಶ್ವವಿದ್ಯಾಲಯದಲ್ಲಿ ಏರ್ಪಡಿಸುತ್ತಿದೆ ಎಂದು ಕುಲಪತಿ ಪ್ರೊ. ವಿದ್ಯಾಶಂಕರ್ ಎಸ್. ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.
ಉದ್ಯೋಗಕ್ಕೆ ಸೇರಿಕೊಳ್ಳುವ ಸಮಯದಲ್ಲೇ ಪದವಿ ಪ್ರಮಾಣಪತ್ರಗಳನ್ನು ಸಲ್ಲಿಸಲು ಸೂಚಿಸುತ್ತಿರುವುದರಿಂದ ವಿಶ್ವವಿದ್ಯಾಲಯವು ಒಂದು ಶೈಕ್ಷಣಿಕ ವರ್ಷದಲ್ಲಿ ಎರಡು ಘಟಿಕೋತ್ಸವಗಳನ್ನು ನಡೆಸಲು ಯೋಜಿಸಲಾಗಿದೆ.


ಇದರ ಅಂಗವಾಗಿ ವಿತಾವಿ 23 ನೇ ವಾರ್ಷಿಕ ಘಟಿಕೋತ್ಸವದ ಮೊದಲ ಭಾಗ -1ನ್ನು ಕಳೆದ 2023 ಆಗಸ್ಟ್ 1 ರಂದು ಹಮ್ಮಿಕೊಂಡು ಸ್ನಾತಕ (ಯು ಜಿ – ಪದವಿ)ಮತ್ತು ಸಂಶೋಧನಾ ಪದವಿಗಳನ್ನು ನೀಡಲಾಗಿದೆ.
ಅದರಂತೆ ಈ 23 ನೇ ವಾರ್ಷಿಕ ಘಟಿಕೋತ್ಸವದ ಮೊದಲ ಭಾಗ -2 ನ್ನು ಸ್ನಾತಕೋತ್ತರ (ಪಿಜಿ) ಅಂದರೆ ಎಂ.ಬಿ.ಎ., ಎಂ.ಸಿ.ಎ., ಎಂ.ಟೆಕ್.ಹಾಗೂ ಎಂ.ಪ್ಲಾನ್. ಹಾಗೂ ಸಂಶೋಧನಾ ಪದವಿ (ಪಿ. ಎಚ್ ಡಿ., ಎಂ. ಸಿ. , ಇಂಟಿಗ್ರೇಟೆಡ್ ಡುಯಲ್ ಡಿಗ್ರಿ) ಗಳನ್ನು ನೀಡಲಾಗುತ್ತಿದೆ.

23 ನೇ ವಾರ್ಷಿಕ ಘಟಿಕೋತ್ಸವ(ಭಾಗ -2) ನ್ನು ಗುರುವಾರ, ದಿನಾಂಕ 7 ನೇ ಮಾರ್ಚ್ ಬೆಳಗ್ಗೆ 11.30 ಕ್ಕೆ ವಿ.ತಾ.ವಿ.“ಜ್ಞಾನಸಂಗಮ” ಆವರಣದ ಡಾ. ಎ. ಪಿ. ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿಆಯೋಜಿಸಲಿದೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಉಪಸ್ಥಿತರಿರುವರು.

ರಾಮನ್ ಮ್ಯಾಗ್ಸಸ್ಸೆ ಹಾಗೂ ರಾಜ್ಯ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು
ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ, ಸೆಲ್ಕೋ ಫೌಂಡೇಶನ್ ಹಾಗೂ ಸಹ – ಸಂಸ್ಥಾಪಕರು, ಸೆಲ್ಕೋ ಇಂಡಿಯಾದ ಡಾ. ಹರೀಶ್ ಹಂದೆ ಮುಖ್ಯ ಅತಿಥಿಗಳಾಗಿ ಘಟಿಕೋತ್ಸವ ಭಾಷಣ ಮಾಡುವರು.
ವಿಶ್ವವಿದ್ಯಾಲಯದ 23 ನೇ ವಾರ್ಷಿಕ ಘಟಿಕೋತ್ಸವದ (ಭಾಗ -2 ) ಸಮಯದಲ್ಲಿ ಪದವಿಗಳನ್ನು ನೀಡಲಾಗುವುದು.

ಕರ್ನಾಟಕವನ್ನು ಜಾಗತಿಕ ಅಧ್ಯಯನ ತಾಣವನ್ನಾಗಿ ರೂಪಿಸುವ ಮತ್ತು ಶಿಕ್ಷಣದ ಅಂತರಾಷ್ಟ್ರೀಕರಣಕ್ಕೆ ವಿ. ಟಿ. ಯು. ಸಂಶೋಧನೆಗೆ ಮತ್ತು ನಾವೀನ್ಯತೆಗೆ ಒಟ್ಟುಗೂಡುವ ಉದ್ದೇಶದಿಂದ ಮತ್ತು ಹೊಸದಾದ ಬೋಧನಾ ಆಯಾಮಗಳ ಬಗ್ಗೆ ಚಿಂತನೆ ನಡೆಸಿದ್ದು ಉತ್ತಮ ಗುಣಮಟ್ಟದ ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಹಾಗೂ ಔದ್ಯೋಗಿಕ ರಂಗದ ದಿಗ್ಗಜರೊಂದಿಗೆ ಇಂಟರ್ನ್ ಶಿಪ್ / ತರಬೇತಿ ರೀತಿಯಲ್ಲಿ ಅಧ್ಯಾಪಕರು/ವಿದ್ಯಾರ್ಥಿ ವಿನಿಮಯದಂತಹ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ.
ಜೊತೆಗೆ ನಮ್ಮ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ/ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪ್ರಯತ್ನ ಪಡುವ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬ, ಅಡೆತಡೆಗಳು/ತೊಂದರೆಗಳನ್ನು ಎದುರಿಸಬಾರದು ಎಂದು ವಿ ಟಿ ಯು ಅಂತರಾಷ್ಟ್ರೀಯ ಶೈಕ್ಷಣಿಕ ಕ್ಯಾಲೆಂಡರ್‌ನೊಂದಿಗೆ ವಿ ಟಿ ಯು ಶೈಕ್ಷಣಿಕ ಕ್ಯಾಲೆಂಡರ್‌ ನ್ನು ಸರಿ ಹೊಂದುವಂತೆ ಮಾಡಿ ದಾಖಲೆ ಸಮಯದಲ್ಲಿ ಪರೀಕ್ಷಾ ಫಲಿತಾಂಶವನ್ನು ನೀಡುವ ಮೂಲಕ ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ/ಪ್ರತಿಷ್ಠಿತ ಸಂಸ್ಥೆಗಳಿಗೆ ಹೋಗಲು ಬಯಸುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ.
ಅಷ್ಟೇ ಅಲ್ಲದೆ ಮೇಲೆ ತಿಳಿಸಿದಂತೆ ಉನ್ನತ ವ್ಯಾಸಂಗ ಜೊತೆಗೆ ಔದ್ಯೋಗಿಕ ಕ್ಷೇತ್ರದಲ್ಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಪದವೀಧರರಿಗೆ ಪದವಿ ಪ್ರಮಾಣಪತ್ರಗಳನ್ನು ನೀಡುವಲ್ಲಿ ವಿಳಂಬವನ್ನು ತಪ್ಪಿಸಲು, ಕಾರಣ ಪದವಿ ಶಿಕ್ಷಣ ಮುಗಿಸಿ ಕ್ಯಾಂಪಸ್ ಆಯ್ಕೆ ಅಥವಾ ನೇರ ಆಯ್ಕೆ ಮುಖಾಂತರ ಉದ್ಯೋಗ ಸೇರುವ ಪದವೀಧರರಿಗೆ ಹಲವಾರು ಕಂಪನಿಗಳು ಮತ್ತು ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಸಂಸ್ಥೆಗಳು ಇದರಿಂದ ಅನುಕೂಲವಾಗಲಿದೆ ಎಂದು ಅವರು ವಿವರಿಸಿದರು.

 

ಬಸ್‌ಗಳ ವ್ಯವಸ್ಥೆ :
ಘಟಿಕೋತ್ಸವಕ್ಕೆ ಆಗಮಿಸುವ ವಿದ್ಯಾರ್ಥಿಗಳು, ಪಾಲಕರು ಹಾಗೂ ಆಹ್ವಾನಿತರಿಗೆ ಗುರುವಾರ, ದಿನಾಂಕ 7 ರಂದು ಕೇಂದ್ರ ಬಸ್ ನಿಲ್ದಾಣ, ಬೆಳಗಾವಿಯಿಂದ ಬೆಳಗ್ಗೆ 7.39 ರಿಂದ 9.೦೦ ಘಂಟೆಯವರೆಗೆ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು.

ಕುಲಸಚಿವರಾದ ಪ್ರೊ.ಬಿ.ಈ.ರಂಗಸ್ವಾಮಿ ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ. ಟಿ.ಎನ್. ಶ್ರೀನಿವಾಸ ಉಪಸ್ಥಿತರಿದ್ದರು.

To promote Karnataka as a global study destination and Internationalization of education VTU has taken many measures such as facilitating research / teaching collaborations and faculty /student exchange with high-quality foreign HEIs.
University is all set to help our students who wish to go to abroad for higher studies by announcing calendar of events in line with the International Academic Calendar so that our students will not face any hurdles/difficulties in admissions process at foreign universities.
In view of the above and also to avoid delay in award of degree certificates to graduates as many companies and public sector entities are instructing to submit degree certificates at the time of joining, University is planned to conduct two Convocations in a year.
Part 1 of 23rd Annual Convocation was held on 1st August 2023 to confer degrees of UG (B.E./B.Tech./B.Plan./B.Arch.) and Research (Ph.D./M.Sc.(Engg.)by Research) Degrees.
Visvesvaraya Technological University, Belagavi will be organizingPart-2 of 23rdAnnual Convocation on Thursday, 07th March, 2024 at 11.30AM at Dr.
A.P.J. Abdul Kalam auditorium ‘Jnana Sangama’, VTU, Belagavi to confer degrees of Post-graduation and Research Degrees (Ph.D., M.Sc. (Engg.) by Research and Integrated dual Degrees)

 Shri Thawar chand Gehlot
Hon’ble Governor of Karnataka and Chancellor of the University will preside.

 Dr.M.C.Sudhakar,
Hon’ble minister for Higher Education, Govt. of Karnataka and Pro- Chancellor of the University will grace the occasion.
 Dr.HarishHande,
Ramon Magsaysay and Karnataka Rajyotsava Awardee,
Chief Executive Officer (CEO), SELCO Foundation and Co-founder, SELCO India,
Will be the Chief Guest and deliver the Convocation Address.
During Part-2 of 23rd Annual Convocation, VTU is conferring MBA-4514, MCA- 4024, M.Tech.-920, M. Arch.-44, M. Plan.-27
Research Degrees-
In this 23rd Annual convocation, University is awarding 667 Ph.D., 02M.Sc.(Engg) by Research and 02 Integrated Dual degrees to Research Scholars. (Total 671 Research Degrees)
 Transportation facility for Graduates and their Parents-
Transportation facility is arranged from CBT Bus Stand to University Campus for the students, Principals and parents for attending the Convocation on Thursday 07th March 2024 from 7.30am to 9.00am.
 Transportation facility for Press and Media Friends-
Transportation facility is arranged from Vartha Bhavana, Belagavi to VTU at 9:30AMforPress&MediaRepresentatives on the day(Thursday7thMacrh2024) of Convocation.
Hon’ble Vice-Chancellor Prof. Vidyashankar addressed the press conference, Registrar Prof. B. E. Rangaswamy and Registrar (Evaluation) Prof. T. N. Sreenivasa were present.