ಸವದತ್ತಿ : ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಭಾನುವಾರ ಸವದತ್ತಿಯ ಶಕ್ತಿದೇವತೆ ಶ್ರೀ ರೇಣುಕಾ (ಯಲ್ಲಮ್ಮ) ದೇವಿಯ ದರ್ಶನ, ಆಶೀರ್ವಾದ ಪಡೆದರು.
ನಂತರ, ತಾಲೂಕಿನ ಹೂಲಿ ಗ್ರಾಮದ ಶ್ರೀ ಬಾಲಲೀಲಾ ಸಂಗಮೇಶ್ವರ ಸಾಂಬಯ್ಯನವರ ಮಠಕ್ಕೆ ಭೇಟಿ ನೀಡಿ ಶ್ರೀ ಉಮೇಶ್ವರ ಶಿವಾಚಾರ್ಯ ಅಜ್ಜನವರ ಆಶೀರ್ವಾದವನ್ನು ಸಹ ಪಡೆದರು.
ಈ ಸಮಯದಲ್ಲಿ ವಿರೂಪಾಕ್ಷ ತೋರಗಲ್, ಯಲ್ಲಪ್ಪ ಕರ್ಲಕಟ್ಟಿ, ಮಲ್ಲಿಕಾರ್ಜುನ ಗೊರಬಾಳ್, ಹನುಮಂತ ಗೊರವನಕೊಳ್ಳ, ಅಶೋಕ್ ಕುಲಕರ್ಣಿ, ಕುಮಾರ ಹಂಪಣ್ಣವರ, ಕೆಂಚನಗೌಡ ರಾಯನಗೌಡ, ಸಿದ್ದಪ್ಪ ಗಿಡಗನವರ, ಗಂಗಪ್ಪ ಹಾಲಪ್ಪನವರ, ಅಭಿಷೇಕ್ ತಿಪ್ರಾಶಿ, ಮಲ್ಲು ಜಕಾತಿ ಅಲ್ಲಮಪ್ರಭು ಪ್ರಭುನವರು, ಪ್ರಕಾಶ್ ಲಮಾಣಿ, ಸಂತೋಷ ಲಮಾಣಿ, ಪ್ರಧಾನ ಅರ್ಚಕರಾದ ಎಡೆಯೂರಯ್ಯ ಮುಂತಾದವರು ಉಪಸ್ಥಿತರಿದ್ದರು.