ಬಾವಿ ತೋಡುವಾಗ ಮರದ ಬೃಹತ್ ತುಂಡು ಪತ್ತೆ
ಭಟ್ಕಳ : ತಾಲೂಕಿನ ಮುರ್ಡೇಶ್ವರ ಮಾವಳ್ಳಿ 1 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಾವಿ ತೋಡುವಾಗ ಮರದ ಬೃಹತ್ ತುಂಡು ಪತ್ತೆಯಾಗಿದೆ.
ನೇರಿಕುಳಿಯ ಮಾಬ್ಲು ಜಟ್ಟ ನಾಯ್ಕ ಅವರ ಜಾಗದಲ್ಲಿ ಹೊಸದಾಗಿ ಬಾವಿ ತೋಡುವಾಗ ಸುಮಾರು 20 ಅಡಿ ಆಳದಲ್ಲಿ ಬಾವಿಗೆ ಅಡ್ಡಲಾಗಿ ಪತ್ತೆಯಾಗಿದೆ.
ಈ ಮರ ಸುಮಾರು 500 ವರ್ಷ ಹಳೆಯದ್ದು ಎಂದು ಅಂದಾಜಿಸಲಾಗಿದೆ. ಈ ಬಾವಿಯಲ್ಲಿ ದೊರೆತ ದೊಡ್ಡ ಮರವನ್ನು ನೋಡಲು ಊರಿನ, ಪರ ಊರಿನ ಸುತ್ತಮುತ್ತಲಿನ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ.
ಈ ಮರದ ತುಂಡನ್ನು ಮಷನ್ ಗಳ ಮೂಲಕ ಕತ್ತರಿಸಿ ಹೊರ ತೆಗೆಯಲಾಗುತ್ತಿದ್ದು, ಜನರ ಕುತೂಹಲಕ್ಕೆ ಕಾರಣವಾಗಿದೆ.