ಉಡುಪಿ/ಮಂಗಳೂರು : ಕರಾವಳಿ ಭಾಗದ ಪ್ರಮುಖ ಬಿಲ್ಲವ ನಾಯಕ ವಿನಯ್ ಕುಮಾರ್ ಸೊರಕೆ ಅವರಿಗೆ ಕಾಂಗ್ರೆಸ್ ಪಕ್ಷ ಇದೀಗ ಚುನಾವಣೆ ಎದುರಲ್ಲೇ ಬಹುದೊಡ್ಡ ಜವಾಬ್ದಾರಿ ವಹಿಸಿದೆ. ಅವರನ್ನು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಹುದ್ದೆಗೆ ನೇಮಕ ಮಾಡಿದೆ. ಈ ಮೊದಲು ಅವರ ಹೆಸರು ಮಂಗಳೂರು ಲೋಕಸಭಾ ಮತಕ್ಷೇತ್ರಕ್ಕೆ ಪ್ರಮುಖವಾಗಿ ಕೇಳಿಬಂದಿತ್ತು. ಆದರೆ ಮಂಗಳೂರು ಕ್ಷೇತ್ರದಲ್ಲಿ ಕೇಂದ್ರದ ಮಾಜಿ ಸಚಿವ ಜನಾರ್ಧನ್ ಪೂಜಾರಿ ಅವರ ಆಪ್ತ ಪದ್ಮರಾಜ್ ಅವರಿಗೆ ಟಿಕೆಟ್ ನೀಡಲಾಗುತ್ತಿದೆ. ಹೀಗಾಗಿ ಇದೀಗ ಕೊನೆಗೂ ಸೊರಕೆಯವರಿಗೆ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ದಯಪಾಲಿಸಲಾಗಿದೆ. ಅವರು ಹದಿಮೂರನೇ ಲೋಕಸಭೆಯಲ್ಲಿ ಉಡುಪಿ (ಲೋಕಸಭಾ ಕ್ಷೇತ್ರ) ಪ್ರತಿನಿಧಿಸಿದ್ದರು . ಅವರು 1985 ರಿಂದ 1994 ರವರೆಗೆ ಕರ್ನಾಟಕ ವಿಧಾನಸಭೆಯಲ್ಲಿ ಪುತ್ತೂರು ಕ್ಷೇತ್ರವನ್ನು ಪ್ರತಿನಿಧಿಸಿದರು. ಅವರು 2013 ರ ವಿಧಾನಸಭಾ ಚುನಾವಣೆಯಲ್ಲಿ ಕಾಪುವಿನಿಂದ ಗೆದ್ದರು. ಅವರು 2013 ರಿಂದ 2016 ರವರೆಗೆ ಕರ್ನಾಟಕ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದರು.