ಉಡುಪಿ/ಮಂಗಳೂರು: ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರಿಗೆ ಕಾಂಗ್ರೆಸ್ ಪಕ್ಷ ಇದೀಗ ಪಕ್ಷದ ಕಾರ್ಯಧ್ಯಕ್ಷ ಹುದ್ದೆ ನೀಡಿದೆ. ಕರಾವಳಿ ಭಾಗದ ಪ್ರಮುಖ ಬಂಟ ಸಮುದಾಯಕ್ಕೆ ಸೇರಿರುವ ಮಂಜುನಾಥ ಭಂಡಾರಿ ಅವರಿಗೆ ಕಾಂಗ್ರೆಸ್ ಪಕ್ಷ ಇದೀಗ ಕರಾವಳಿ ಭಾಗದ ಮತ ಸೆಳೆಯುವ ತಂತ್ರವಾಗಿ ಮಹತ್ವದ ಹುದ್ದೆಗೆ ನೇಮಕ ಮಾಡಿ ಆದೇಶ ಹೊರಡಿಸಿದೆ.