ಬೆಳಗಾವಿ : ನಗರದ ಕೆಎಲ್ ಇ ಸಂಸ್ಥೆಯ ಅಂಗಸಂಸ್ಥೆಯಾದ ಕೆ ಎಲ್ ಇ ಕಾಹೆರ್ ವಿಶ್ವನಾಥ ಕತ್ತಿ ದಂತ ವಿಜ್ಞಾನ ಸಂಸ್ಥೆಯ ಪಿಡಿಯಾರ್ಟಿಕ್ ಮತ್ತು ಪ್ರಿವೆಂಟಿವ್ ಡೆಂಟಿಸಿಟ ವಿಭಾಗವು ದಂತ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಕೆಎಲ್ಇ ವಿಕೆ ದಂತ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶುಕ್ರವಾರ 22/3/2024 ರಂದು ಒಂದು ದಿನದ ಸಿಡಿಇ ಕಾರ್ಯಾಗಾರ ಆಯೋಜಿಸಲಾಗಿತ್ತು.

ಪುಣೆಯ ಮಕ್ಕಳ ದಂತ ವೈದ್ಯ ಡಾ. ಓಂಕಾರ ಹರಿದಾಸ ಅವರು ಅತಿಥಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿ, ಮಕ್ಕಳ ದಂತ ಆರೈಕೆ ಮಾಸ್ಟರಿಂಗ್ ಮಾಡುವ ತಂತ್ರಗಳ ಬಗ್ಗೆ ತಿಳಿಸಿಕೊಟ್ಟರು. ಮಕ್ಕಳ ದಂತ ರಕ್ಷಣೆಯ ಅಭ್ಯಾಸ ಹೆಚ್ಚಿಸುವ ಕುರಿತು ಸಲಹೆಗಳು ನೀಡಿದರು.
ಮಂಗಳೂರಿನ ದಂತ ವೈದ್ಯ ಡಾ. ಅಬ್ದುಲ್ ರಹಿಮಾನ್ ರಮೀಝ್ ಮಾತನಾಡಿ, ದಂತ ವೈದ್ಯಶಾಸ್ತ್ರದಲ್ಲಿ ಸೌಂದರ್ಯ ಶಾಸ್ತ್ರದ ಕಲಾತ್ಮಕತೆಯ,ದಂತ ಗಳಿಂದ ವ್ಯಕ್ತಿಯ ಸೌಂದರ್ಯ ಮತ್ತು ವಿವಿಧ ಚಿಕಿತ್ಸೆಯ ವಿಧಾನಗಳನ್ನು ವಿವರಿಸಿ ಹೇಳಿದರು.
ದಕ್ಷಿಣ ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ದಂತ ವೈದ್ಯಕೀಯ ಮಹಾವಿದ್ಯಾಲಯಗಳಿಂದ 100 ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ಅಲ್ಕಾ ಕಾಳೆ ಅಧ್ಯಕ್ಷತೆ ವಹಿಸಿದ್ದರು.

ಈ ಸಮಾರಂಭದಲ್ಲಿ ಕೆ ಎಲ್ ಇ ಸಂಸ್ಥೆಯ ಆಜೀವ ಸದಸ್ಯರಾದ ಡಾ. ಶಿವಯೋಗಿ ಹೂಗಾರ, ಡಾ. ಸೋನಲ್ ಜೋಶಿ,ವಿವಿಧ ವಿಭಾಗಗಳ ಮುಖ್ಯಸ್ಥರು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಜರಿದ್ದರು. ಡಾ. ಶಿವಯೋಗಿ ಹೂಗಾರ ಸ್ವಾಗತಿಸಿದರು, ಡಾ. ವಿದ್ಯಾವತಿ ಪಾಟೀಲ ಪರಿಚಯಿಸಿದರು. ಡಾ.ಚಂದ್ರಶೇಖರ ಬಾಡಕರ ಮತ್ತು ಡಾ.ನೀರಜ್ ಗೋಖಲೆ ತಾಂತ್ರಿಕ ಸಹಕಾರ ನೀಡಿದರು. ಡಾ ಚೈತನ್ಯ ಉಪ್ಪಿನ ವಂದಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿ ವರ್ಗ ಮತ್ತು ಸ್ನಾತಕೋತ್ತರ ದಂತ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.