ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ತಾಯಿ-ಮಕ್ಕಳು
ಪಾಲಬಾವಿ(ಬೆಳಗಾವಿ ಜಿಲ್ಲೆ) :
ರಾಯಬಾಗ ತಾಲೂಕಿನ ಪಾಲಬಾವಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಯಿ-ಮಕ್ಕಳು ಪರೀಕ್ಷೆ ಬರೆದಿದ್ದಾರೆ. ಪಾಲಬಾವಿ ಗ್ರಾಮದ ಮಲಗೌಡ ನಾಯಿಕ (ಪಾಟೀಲ) ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಶ್ರೀಶೈಲ ಮೇತ್ರಿ ಪರೀಕ್ಷೆ ಬರೆಯುತ್ತಿದ್ದರೇ, ಅದೇ ಪ್ರೌಢಶಾಲೆಯ ಬಿಸಿಯೂಟ ಅಡುಗೆ ಸಹಾಯಕಿ ಶಶಿಕಲಾ ಮೇತ್ರಿ ಪುನರಾವರ್ತಿತರಾಗಿ ಪರೀಕ್ಷೆ ಬರೆಯುತ್ತಿದ್ದಾರೆ. ಅದೇ ಶಾಲೆಯ ಇನ್ನೊರ್ವ ವಿದ್ಯಾರ್ಥಿ ಬರಮಲಿಂಗ ಮೇತ್ರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದರೇ ಅವರ ತಾಯಿ ಸುನಂದಾ ಮೇತ್ರಿ ಪುನರಾವರ್ತಿತರಾಗಿ ಪರೀಕ್ಷೆ ಬರೆಯುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ಕೇಂದ್ರವಾಗಿ 3 ವರ್ಷಗಳಲ್ಲಿ ತಾಯಿ-ಮಕ್ಕಳು ಒಟ್ಟಿಗೆ ಕೂಡಿ ಕುಳಿತು ಪರೀಕ್ಷೆ ಬರೆಯುತ್ತಿರುವುದು ಇದೇ ಮೊದಲು.