ದೆಹಲಿ:
ಸಿಲ್‌ಕ್ಯಾರ ಸುರಂಗದಿಂದ 41 ಕಾರ್ಮಿಕರ ರಕ್ಷಣೆಯಾದ ಬೆನ್ನಲ್ಲೇ ಇದೀಗ ಇಡೀ ಘಟನಾವಳಿಗಳ ಕುರಿತು ಚಿತ್ರ ನಿರ್ಮಿಸಲು ಚಲನಚಿತ್ರ ನಿರ್ಮಾಪಕರು ಪೈಪೋಟಿಗೆ ಬಿದ್ದಿದ್ದಾರೆ.

ಸುರಂಗ ರಕ್ಷಣೆ ಕಾರ್ಯಾಚರಣೆಯ ಸಾಹಸಗಾಥೆ ಬೆಳ್ಳಿತೆರೆಯಲ್ಲಿ ಬರಬಹುದು ಎಂದು ಎಲ್ಲರಿಗೂ ಅನಿಸಿತ್ತು. ಅದೀಗ ಖಾತ್ರಿಯಾಗಿದೆ. ಅದಕ್ಕಾಗಿ ಮುಂಬಯಿಯಲ್ಲಿ ಕೇಂದ್ರ ಸ್ಥಾನ ಹೊಂದಿರುವ ಬಾಲಿವುಡ್‌ ನಿರ್ದೇಶಕರು, ಸಿನೆಮಾ ಶೀರ್ಷಿಕೆ ನೋಂದಣಿ ಮಾಡಿಸಲು ಸ್ಪರ್ಧೆಗೆ ಇಳಿದಿದ್ದಾರೆ.

Rescue’, Rescue&41, and Mission 41& The Great & in ನೋಂದಣಿಯಾಗಿದ್ದು, ಮುಂದಿನ ದಿನಗಳಲ್ಲಿ ಇದೇ ರೀತಿಯ ಹೆಸರಿನ ಇನ್ನಷ್ಟು ಶೀರ್ಷಿಕೆಗಳು ನೋಂದಣಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇಂಡಿಯನ್‌ ಮೋಶನ್‌ ಪಿಕ್ಚರ್‌ ಪ್ರೊಡ್ನೂಸರ್ಸ್‌ ಅಸೋಸಿಯೇಶನ್‌ (ಐಎಂಪಿಪಿಎ), ಪ್ರೊಡ್ನೂಸರ್ಸ್‌ ಗಿಲ್ಡ್‌ ಆಫ್ ಇಂಡಿಯಾ, ಇಂಡಿಯನ್‌ ಫಿಲ್ಮ್ ಆ್ಯಂಡ್‌ ಟೆಲಿವಿಶನ್‌ ಪ್ರೊಡ್ನೂಸರ್ಸ್‌ ಕೌನ್ಸಿಲ್‌ (ಐಎಫ್ಟಿಪಿಸಿ)ಗೆ ಕೋರಿಕೆಗಳು ಸಲ್ಲಿಕೆಯಾಗಿವೆ.