ಬೆಂಗಳೂರು :
ಉದ್ಯಮಿ ವಿಜಯ ಘೋರ್ಪಡೆ ಅವರೊಂದಿಗೆ ನಟಿ ಪೂಜಾ ಗಾಂಧಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಚಿತ್ರರಂಗದ ಗಣ್ಯರು, ಅಭಿಮಾನಿಗಳು ನವದಂಪತಿಗೆ ಶುಭ ಹಾರೈಸಿದರು. ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಬಂಧು-ಮಿತ್ರರು ಚಿತ್ರರಂಗದ ಗಣ್ಯರು, ಅಭಿಮಾನಿಗಳ ಸಮ್ಮುಖದಲ್ಲಿ ಬುಧವಾರ ಸರಳವಾಗಿ ಅವರ ವಿವಾಹ ನೆರವೇರಿದೆ.

ಮೂಲತಃ ಉತ್ತರಪ್ರದೇಶದವರಾದ ಪೂಜಾ ಗಾಂಧಿ ಕನ್ನಡದ ಚಲನಚಿತ್ರಗಳಲ್ಲಿ ಅಭಿನಯಿಸುತ್ತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಮ್ಮ ಕನ್ನಡ ಪ್ರೀತಿಯಿಂದ ಕನ್ನಡಿಗರ ಮನಸು ಗೆದ್ದಿದ್ದಾರೆ. ಕನ್ನಡ ಮಾತನಾಡಲು ಅಷ್ಟೇ ಅಲ್ಲ, ಓದಲು ಮತ್ತು ಬರೆಯಲು ಅವರು ಕಲಿತಿದ್ದು ಕನ್ನಡಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಕರ್ನಾಟಕದ ಸೊಸೆಯಾಗಿರುವ ಅವರು ತಾವು ಕನ್ನಡ ಓದಲು ಬರೆಯಲು ಕಲಿತಿರುವುದಲ್ಲದೆ ತಮ್ಮ ತಾಯಿಗೂ ಕನ್ನಡ ಹೇಳಿಕೊಟ್ಟಿದ್ದಾರೆ ಎನ್ನುವುದು ವಿಶೇಷ. ಹಿಂದಿ ಮತ್ತು ಬಂಗಾಳಿ ಚಲನಚಿತ್ರಗಳಲ್ಲಿ ನಟಿಸುತ್ತಿದ್ದ ಪೂಜಾಗಾಂಧಿ 2006ರಲ್ಲಿ ತೆರೆಕಂಡ ಮುಂಗಾರು ಮಳೆ ಚಲನಚಿತ್ರದ ಮೂಲಕ ಕನ್ನಡ ಚಲನಚಿತ್ರಕ್ಕೆ ಕಾಲಿಟ್ಟರು. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರ ಕನ್ನಡದಲ್ಲಿ ದಾಖಲೆಯ ಕಲೆಕ್ಷನ್ ಮಾಡಿತ್ತು.

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪೂಜಾಗಾಂಧಿ ಅವರು ನಟಿಸಿದ್ದರು.
ಪುನೀತ್ ರಾಜಕುಮಾರ್, ಯಶ್, ಉಪೇಂದ್ರ ಮುಂತಾದವರ ಚಲನಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂ ಚಲನಚಿತ್ರಗಳಲ್ಲೂ ಅವರು ಅಭಿನಯಿಸಿದ್ದಾರೆ.