ಅಂಕೋಲಾ: ಆನ್ಲೈನ್ಲ್ಲಿ ಎಲೆಕ್ಟಿಕಲ್ ಹಾಗೂ ಪ್ಲಂಬಿಂಗ್ ಕೆಲಸಕ್ಕೆ ಬೇಕಾಗುವ ಟೂಲ್ ಕಿಟ್ ಅನ್ನು ಆರ್ಡರ್ ಮಾಡಿದ್ದ ವ್ಯಕ್ತಿಗೆ ಪಾರ್ಸೆಲ್ನಲ್ಲಿ ನಾಲ್ಕು ಕಲ್ಲುಗಳು ಬಂದ ಘಟನೆ ಉತ್ತರ ಕನ್ನಡದ ಅಂಕೋಲದಲ್ಲಿ ನಡೆದಿದೆ. ಆನ್ಲೈನ್ ಕಂಪನಿಯ ವಿರುದ್ಧ ಸಿಟ್ಟಿಗೆದ್ದ ಗ್ರಾಹಕ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ. ತಾಲೂಕಿನ ಯುವಕರೊಬ್ಬರು ಮನೆಯ ಎಲೆಕ್ಟಿಕಲ್ ಕೆಲಸ ಮಾಡುವ ಉದ್ಯೋಗದಲ್ಲಿದ್ದು, ತಮ್ಮ ಕೆಲಸಕ್ಕೆ ಟೂಲ್ ಕಿಟ್ ಅವಶ್ಯವಿರುವುದರಿಂದ ಆನ್ ಲೈನ್ನಲ್ಲಿ ಸುಮಾರು ₹5000 ಮೌಲ್ಯದ ಟೂಲ್ ಕಿಟ್ ಆರ್ಡ್ರಮಾಡಿದ್ದರು. ನಾಲ್ಕು ದಿನಗಳ ನಂತರ ಬಂದ ಪಾರ್ಸೆಲ್ ಬಿಚ್ಚಿ ನೋಡಿದ ಯುವಕನಿಗೆ ಆಘಾತ ಕಾದಿತ್ತು. ಟೂಲ್ ಕಿಟ್ ಬಾಕ್ಸ್ನಲ್ಲಿ ಕೆ.ಜಿ. ಭಾರದ ನಾಲ್ಕು ಕಲ್ಲುಗಳನ್ನು ತುಂಬಿ ಕಳಿಸಿರುವುದನ್ನು ಕಂಡು ಯುವಕ ಹೌಹಾರಿದ್ದಾನೆ. ಪಾರ್ಸೆಲ್ ಬಾಕ್ಸ್ ಅನ್ನು ಮಾತ್ರ ಅಚ್ಚುಕಟ್ಟಾಗಿ ಪ್ಯಾಕ್ ಮಾಡಿದ್ದು, ಕೊಂಚವೂ ಅನುಮಾನ ಬಾರದ ರೀತಿಯಲ್ಲಿ ಟೂಲ್ ಕಿಟ್ ಎಷ್ಟು ಭಾರ ಇರುತ್ತದೆಯೋ ಅಷ್ಟೇ ಭಾರದ ಕಲ್ಲಿಟ್ಟು ಕೊಡಲಾಗಿದೆ.