ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಕಾರ್ಪೋರೇಟರ್ ಪುತ್ರಿ ನೇಹಾಳನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿ ಫಯಾಜ್ ರುಂಡ ಚೆಂಡಾಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಜಯ ಕರ್ನಾಟಕ ಅಧ್ಯಕ್ಷ ಹಿಜರಿ ಘೋಷಣೆ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದಿಗಾರರೊಂದಿಗೆ ಮಾತನಾಡಿದ ಅವರು, ಫಯಾಜ್ ರುಂಡ ಚೆಂಡಾಡಿದರೆ 10 ಲಕ್ಷ ಬಹುಮಾನ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಯಾರು ಆರೋಪಿ ಫಯಾಜ್ ರುಂಡವನ್ನು ಚೆಂಡಾಡುತ್ತಾರೋ ಅವರಿಗೆ 10 ಲಕ್ಷ ರೂಪಾಯಿ ಬಹುಮಾನವನ್ನು ಕೊಡುತ್ತೇವೆ ಎಂದಿದ್ದಾರೆ.
ನಾವು ಶನಿವಾರ ಹುಬ್ಬಳ್ಳಿಯನ್ನು ಬಂದ್ ಮಾಡುತ್ತೇವೆ. ಯಾರ ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದಾರೋ ಅವರೆಲ್ಲರೂ ನಮ್ಮ ಬಂದ್ ಗೆ ಬೆಂಬಲ ಕೊಡಬೇಕು. ನಾವು ಮೆರವಣಿಗೆ ಮೂಲಕ ಹುಬ್ಬಳ್ಳಿ ಬಂದ್ ಮಾಡುತ್ತೇವೆ ಎಂದು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಇಜಾರಿ ಹೇಳಿದ್ದಾರೆ.