ಹುಬ್ಬಳ್ಳಿ: ಕಾಲೇಜು ಕ್ಯಾಂಪಸ್‌ನಲ್ಲಿ ಹತ್ಯೆಯಾದ
ನೇಹಾ ಹಿರೇಮ‌ಠ ಪೋಷಕರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.
ಹುಬ್ಬಳ್ಳಿಗೆ ಆಗಮಿಸಿದ್ದ ಅಮಿತ್ ಶಾ, ನೇಹಾ ಹೆತ್ತವರಾದ ನಿರಂಜನ್ ಹಿರೇಮಠ ಮತ್ತು ಗೀತಾ ಹಿರೇಮಠ ಅವರನ್ನು ಭೇಟಿಯಾದರು.

ನಿಮ್ಮ ಜೊತೆ ನಾವಿದ್ದೇವೆ ಎಂದು ಇದೇ ವೇಳೆ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ. ಅಮಿತ್ ಶಾ ಭೇಟಿ ಬಳಿಕ ಮಾಧ್ಯಮಕ್ಕೆ ಮಾತನಾಡಿದ ನಿರಂಜನ್, ನನಗೆ ಕೆಲವೊಂದು ಬೇಡಿಕೆಗಳಿದ್ದವು. ಎಫ್‌ಐಆ‌ರ್ ಪ್ರತಿ ಜೊತೆ ಬೇಡಿಕೆಗಳ ಮನವಿಯನ್ನು ಕೊಟ್ಟಿದ್ದೇನೆ. ನೇಹಾ ಹೆಸರಲ್ಲೇ ಪ್ರತ್ಯೇಕ ಕಾನೂನು ಮಾಡಬೇಕು. ಈ ರೀತಿಯ ಅಪರಾಧ ಎಸಗುವವರಿಗೆ ಗಲ್ಲು ಶಿಕ್ಷೆ ಆಗುವ ಕಾನೂನು ತರಬೇಕು ಎಂಬುದಾಗಿ ಆಗ್ರಹ ಮಾಡಿದ್ದೇನೆ ಎಂದರು.