ಗೋಳಿಯಂಗಡಿ:
ಹಿಲಿಯಾಣ ಶ್ರೀದುರ್ಗಾಪರಮೇಶ್ವರಿ(ಮಾರಿಕಾಂಬ)
ದೇವಳದಲ್ಲಿ ವಾರ್ಷಿಕ ಉತ್ಸವವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮೇ 8 ನೇ ಬುಧವಾರ
ನಡೆಯಲಿದೆ. ಬೆಳಿಗ್ಗೆ ದುರ್ಗಾಹೋಮ, ಮಧ್ಯಾಹ್ನ ಗಂ 12.30 ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ರಾತ್ರಿ ಗಂ.8 ರಿಂದ ಶ್ರೀರಾಮ ಮಹಿಳಾ ಭಜನಾ ಮಂಡಳಿ ಗಂಗ್ಗೋಳಿ, ಶ್ರೀಉದ್ಬವ ಲಿಂಗೇಶ್ವರ ಭಜನಾ ಮಂಡಳಿ ಮಣೂರು- ಪಡುಕೆರೆ ಇವರಿಂದ ಭಜನಾ ಕಾರ್ಯಕ್ರಮ, ಗಂ 9 ರಿಂದ ಹಣ್ಣು ಕಾಯಿ ಸೇವೆ, ಗಂ 9.30 ರಿಂದ ಮಹಾ ಅನ್ನಸಂತರ್ಪಣೆ, , ಗಂ 10 ರಿಂದ ಗೆಜ್ಜೆನಾದ ಯಕ್ಷ ಕಲಾರಂಗ ಡ್ಯುಯಲ್ ಸ್ಟಾರ್ ಶಾಲೆ
ಅಮಾಸೆಬೈಲು ಶಾಲಾ ವಿದ್ಯಾರ್ಥಿಗಳಿಂದ ಚಕ್ರವ್ಯೂಹ
ಯಕ್ಷಗಾನ ಪ್ರದರ್ಶನ,ಗಂ 12 ರಿಂದ ದರುಶನ, ಕೆಂಡಸೇವೆ ನಡೆಯಲಿದೆ ಎಂದು ದೇವಳದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.