ಬೆಳಗಾವಿ : ಮಹಾರಾಷ್ಟ್ರದ ಜತ್ತ ಬಳಿ ಕ್ರೂಸರ್ ವಾಹನ ಮಗುಚಿ ಅಥಣಿ ತಾಲೂಕಿನ ಬಳ್ಳಿಗೇರಿಯ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ.
ಮಹಾದೇವಿ ಚೌಗಲಾ, ಗೀತಾ ದೊಡ್ಡಮನಿ, ಕಸ್ತೂರಿ ಮೃತಪಟ್ಟವರು. ಕೆಲಸಕ್ಕೆ ಮಹಾರಾಷ್ಟ್ರಕ್ಕೆ ಹೊರಟಿದ್ದರು. ಕ್ರೂಸರ್ ವಾಹನದ ಎಡಬದಿಯ ಟೈರ್ ಸ್ಪೋಟಗೊಂಡು ಈ ಅಪಘಾತ ಸಂಭವಿಸಿದೆ. ವಾಹನದಲ್ಲಿ ಸಂಚರಿಸುತ್ತಿದ್ದ ಹಲವರಿಗೆ ಗಾಯವಾಗಿದ್ದು, ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.