ಬೆಳಗಾವಿ : ಬೈಲಹೊಂಗಲ ಘಟಕದ ಕರ್ತವ್ಯ ನಿರತ ಚಾಲಕ ಮತ್ತು ನಿರ್ವಾಹಕರ ಮೇಲೆ ಏ. 25 ರಂದು ಪ್ರಯಾಣಿಕರು ಮತ್ತು ಅವರ ಸಂಬಂಧಿಕರು ಸೇರಿ ದೈಹಿಕ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈಯುವ ಮೂಲಕ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಮತ್ತು ಆ ಮೂಲಕ ಸಾರ್ವಜನಿಕ ಪ್ರಯಾಣಿಕರಿಗೆ ಅನಾನುಕೂಲತೆ ಉಂಟು ಮಾಡಿದ 13 ಜನ ಪುರುಷ, ಒಬ್ಬ ಮಹಿಳೆ ಸೇರಿ 4 ಜನರ ಮೇಲೆ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಸಂಸ್ಥೆಯಿಂದ ಎಫ್. ಐ. ಆರ್ ದಾಖಲಿಸಲಾಗಿರುತ್ತದೆ.

ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವಲ್ಲಿ ಸಂಸ್ಥೆಯ ಚಾಲಕ, ನಿರ್ವಾಹಕರು ರಜಾ, ಹಬ್ಬ-ಹರಿ ದಿನಗಳು ಸೇರಿದಂತೆ ನಿರಂತರ ಹಗಲಿರುಳು ಶ್ರಮ ಪಡುತ್ತಿದ್ದು, ಸಾರ್ವಜನಿಕ ಪ್ರಯಾಣಿಕರು ಸಾರಿಗೆ ಸಿಬ್ಬಂದಿ ಗಳೊಂದಿಗೆ ಸಹಕರಿಸಲು ಮತ್ತು ತಮ್ಮ ಏನೆ ದೂರು/ಕುಂದು ಕೊರತೆಗಳಿದ್ದಲ್ಲಿ ಬಸ್ ನಿಲ್ದಾಣದ ಅಧಿಕಾರಿ ಅವರಲ್ಲಿ ದೂರು ದಾಖಲಿಸಲು ತಿಳಿಸಲಾಗಿದೆ.
ಈ ಮುಂದೆ ಈ ರೀತಿ ಕರ್ತವ್ಯದ ಮೇಲೆ ಇರುವ ಸಂಸ್ಥೆಯ ಸಿಬ್ಬಂದಿಗಳ ಮೇಲೆ ಹಲ್ಲೆ, ಬೆದರಿಕೆ ಮತ್ತು ಕರ್ತವ್ಯಕ್ಕೆ ಅಡೆ-ತಡೆಯುಂಟು ಮಾಡುವ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೋರಿ ಪೊಲೀಸ್ ಪ್ರಕರಣ ದಾಖಲಿಸಲಾಗುವದು ಎಂದು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.