ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಲಗಾ ಗ್ರಾಮದ ಸರ್ಕಾರಿ ಪೂರ್ಣ ಪ್ರಾಥಮಿಕ ಮರಾಠಿ ಶಾಲೆಯ 140ನೇ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಲೆಗೆ ಡೆಸ್ಕ್ ಗಳನ್ನು ವಿತರಿಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರ ಶೈಕ್ಷಣಿಕವಾಗಿ ಮುನ್ನಡೆಯುತ್ತಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಮ್ಮ ಅಧಿಕಾರದ ಮೊದಲ ಅವಧಿಯಲ್ಲೇ ಕ್ಷೇತ್ರದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಶಾಲೆಗಳಿಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣ, ಸ್ಮಾರ್ಟ್ ಕ್ಲಾಸ್ , ಜಿಮ್, ಕಾಂಪೌಂಡ್ ವಾಲ್ ಇನ್ನಿತರ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಿದ್ದಾರೆ ಎಂದು ಚನ್ನರಾಜ ತಿಳಿಸಿದರು.
ಇದೇ ಸಮಯದಲ್ಲಿ ಶಾಲೆಗೆ 40 ಡೆಸ್ಕ್ ಗಳನ್ನು ವಿತರಿಸಿ, ಮಕ್ಕಳ ಉಜ್ವವ ಭವಿಷ್ಯಕ್ಕಾಗಿ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ವಾಯ್ ಎಮ್ ಸಾಮಜಿ, ಗಣಪತ್ ಮಾರಿಹಾಳ್ಕರ್, ಸಾಗರ್ ಕಾಮಾನಾಚೆ, ರೂಪಾ ಸುತಾರ, ಕಲ್ಲಪ್ಪ ಹನಮಂತಾಚೆ, ಸಚಿನ್ ಸಾಮಜಿ, ಚಂದ್ರಕಾಂತ ಕಾನೋಜಿ, ಕೆ ಕೆ ಸಂತಾಜಿ, ಮಹಾವೀರ ಪಾಟೀಲ, ಭುಜಂಗ್ ಸಾಲ್ಗುಡೆ, ನಜೀರ್ ಮುಲ್ಲಾ, ಅನ್ವರ್ ಲಂಗೂಟಿ, ಪ್ರವೀಣ ಕಾಂಬಳೆ, ಎಮ್ ಎಮ್ ಸಂತಾಜಿ, ಚೇತನ ಕುರಂಗಿ, ಪಿರಾಜಿ ಜಾಧವ್ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.