ಗೋಳಿಯಂಗಡಿ:ವಂಡಾರು ಶ್ರೀಭುವನೇಶ್ವರಿ ದೇವಳದ 13 ನೇ ವರ್ಷದ ವರ್ಧಂತ್ಯುತ್ಸವ ಪ್ರಯುಕ್ತ ಹಮ್ಮಿಕೊಂಡ ಭಜನಾ ಕಾರ್ಯಕ್ರಮದಲ್ಲಿ ಶ್ರೀಭುವನೇಶ್ವರಿ ಭಜನಾ ಮಂಡಳಿ ವಂಡಾರು,ಶ್ರೀ ವಿಶ್ವೇಶ್ವರ ಭಜನಾ ಮಂಡಳಿ ಮಾರ್ವಿ,ಶ್ರೀಶಂಕರನಾರಾಯಣ ಭಜನಾ ಮಂಡಳಿ ಆವರ್ಸೆ,ಶ್ರೀಮಾರಿಕಾಂಬ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕಿರಾಡಿ ಭಜನಾ ತಂಡಗಳನ್ನು ದೇವಳದ ಪರವಾಗಿ ಭಾನುವಾರ ಗೌರವಿಸಲಾಯಿತು. ವಂಡಾರು ಮೂಡುಬೆಟ್ಟು ರವಿ ಬೇಬಿ ಶೆಟ್ಟಿ,ಪ್ರಶಾಂತ ಶೆಟ್ಟಿ ವಂಡಾರು,ಪ್ರವೀಣ ಶೆಟ್ಟಿ ವಂಡಾರು ಹಾಗೂ ಮನೆಯವರು, ವೇ.ಮೂ. ಪರಮೇಶ್ವರ ಭಟ್ ವಂಡಾರು,ಶಂಕರನಾರಾಯಣ ಭಟ್ ವಂಡಾರು,ಧರ್ಮಸ್ಥಳ ಶ್ರೀಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಕೋಶಾಧಿಕಾರಿ ಪೂರ್ಣಿಮಾ ಪೆರ್ಡೂರು, ವಂಡಾರು ಶ್ರೀಭುವನೇಶ್ವರಿ ದೇವಳದ ಆಡಳಿತ ಮಂಡಳಿಯವರು,ಊರ ಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು.