ನವದೆಹಲಿ: ರಾಮಚರಿತಮಾನಸ್‌, ಪಂಚತಂತ್ರ ಮತ್ತು ಸಹೃದಯಲೋಕ-ಲೋಕನವನ್ನು ಯುನೆಸ್ಕೋದ ವಿಶ್ವ ಏಷ್ಯಾ-ಪೆಸಿಫಿಕ್ ಪ್ರಾದೇಶಿಕ ರಿಜಿಸ್ಟ್ರಾರ್‌ ಮೆಮೊರಿಗೆ ಸೇರಿಸಲಾಗಿದೆ. ತನ್ನ ಶ್ರೀಮಂತ ಸಾಹಿತ್ಯ ಪರಂಪರೆ ಮತ್ತು ಸಾಂಸ್ಕೃತಿಕ ಪರಂಪರೆಗೆ ಮಾನ್ಯತೆ ಪಡೆದಿರುವ ಭಾರತದ ಪಾಲಿಗೆ ಇದು ಮಹತ್ವದ ಸಾಧನೆ ಎನಿಸಿದೆ. ಈ ಮೂರು ಸಾಹಿತ್ಯಿಕ ಮೇರುಕೃತಿಗಳನ್ನು ರಿಜಿಸ್ಟರ್‌ನಲ್ಲಿ ಸೇರಿಸಿರುವುದು ನಮ್ಮ ಮಾನವೀಯತೆಯನ್ನು ರೂಪಿಸುವ ವೈವಿಧ್ಯಮಯ ನಿರೂಪಣೆಗಳು ಮತ್ತು ಕಲಾತ್ಮಕ ಅಭಿವ್ಯಕ್ತಿಗಳನ್ನು ಗುರುತಿಸುವ ಮತ್ತು ರಕ್ಷಿಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರಾಮಚರಿತಮಾನಸ್‌, ಪಂಚತಂತ್ರ ಮತ್ತು ಸಹೃದಯಲೋಕ-ಲೋಕನಗಳು ಭಾರತೀಯ ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲೆ ಆಳವಾದ ಪ್ರಭಾವ ಬೀರಿದ ಅಪರೂಪದ ಕೃತಿಗಳಾಗಿವೆ. ಈ ಸಾಹಿತ್ಯ ಕೃತಿಗಳು ಎಲ್ಲವನ್ನೂ ಮೀರಿದವಾಗಿದೆ. ಭಾರತದ ಒಳಗೆ ಮತ್ತು ಹೊರಗೆ ಓದುಗರು ಮತ್ತು ಕಲಾವಿದರ ಮೇಲೆ ಅಗಾಧ ಛಾಪು ಮೂಡಿಸಿದ್ದಲ್ಲದೆ, ಅವರು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ಮತ್ತು ಜ್ಞಾನೋದಯವನ್ನು ಮುಂದುವರೆಸುತ್ತಾರೆ ಎನ್ನುವುದು ಖಚಿತವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಮೂರು ಕೃತಿಗಳನ್ನು ರಿಜಿಸ್ಟರ್‌ನಲ್ಲಿ ಸೇರಿಸಿರುವುದು ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ (IGNCA) ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವ ಮತ್ತು ಸಂರಕ್ಷಿಸುವ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ. ಉಲಾನ್‌ಬಾತರ್‌ನಲ್ಲಿ ನಡೆದ ಏಷ್ಯಾ ಮತ್ತು ಪೆಸಿಫಿಕ್‌ಗಾಗಿ ವಿಶ್ವ ಸಮಿತಿಯ (MOWCAP) 10ನೇ ಸಭೆಯಲ್ಲಿ ಸದಸ್ಯ ರಾಷ್ಟ್ರಗಳ 38 ಪ್ರತಿನಿಧಿಗಳು, 40 ವೀಕ್ಷಕರು ಮತ್ತು ನಾಮನಿರ್ದೇಶಿತರು, ನಾಮನಿರ್ದೇಶನಗಳನ್ನು ಚರ್ಚೆ ಮಾಡಲು ಸೇರಿತ್ತು. ಈ ವೇಳೆ ಭಾರತದ ಮೂರು ಮಹಾಕಾವ್ಯಗಳನ್ನು ಯುನೆಸ್ಕೋ ಪಟ್ಟಿಗೆ ಸೇರಿಸುವಲ್ಲಿ IGNCA ಪ್ರಮುಖ ಪಾತ್ರ ವಹಿಸಿದೆ.

ರಾಮಚರಿತಮಾನಸ್‌, ಪಂಚತಂತ್ರ, ಮತ್ತು ಸಹೃದಯಲೋಕ-ಲೋಕನವನ್ನು IGNCA ಯಶಸ್ವಿಯಾಗಿ ಈ ಸಭೆಯಲ್ಲಿ ಪ್ರಸ್ತುತ ಪಡಿಸಿದೆ. 2008ರಲ್ಲಿ ರೀಜನಲ್‌ ರಿಜಿಸ್ಟ್ರಾರ್‌ ಸ್ಥಾಪನೆಯಾದ ಬಳಿಕ ಈ ಪ್ರಾದೇಶಿನ ನೋಂದಣಿಗೆ IGNCA ಸಲ್ಲಿಸಿದ ಮೊದಲ ನಾಮ ನಿರ್ದೇಶನ ಇದಾಗಿದೆ. ಭಾರತದ ಪಾಲಿಗೆ ಇದು ಮಹಾ ಮನ್ನಣೆ ಎನಿಸಿದ್ದು, ದೇಶದ ಶ್ರೀಮಂತ ಸಾಹಿತ್ಯಿಕ ಪರಂಪರೆ ಮತ್ತು ಸಾಂಸ್ಕೃತಿಕ ಪರಂಪರೆಗಾಗಿ ಗುರುತಿಸಲ್ಪಟ್ಟಿದೆ.