ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಬೇಸಿಗೆ ರಜೆಯಲ್ಲೂ ಶಾಲೆಗೆ ಆಗಮಿಸಬೇಕು ಎನ್ನುವ ಶಿಕ್ಷಣ ಇಲಾಖೆಯ ಸೂಚನೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಜೆಯಲ್ಲಿ ಶಾಲೆಗೆ ಬರುವ ಶಿಕ್ಷಕರಿಗೆ ಗಳಿಕೆ ರಜೆ (ಇಎಲ್) ನೀಡಲು ತೀರ್ಮಾನಿಸಲಾಗಿದೆ. ವೇಳಾಪಟ್ಟಿ ಪ್ರಕಾರ, ಮೇ 29ರ ತನಕ ಶಾಲೆಗಳಿಗೆ ಬೇಸಿಗೆ ರಜೆಯಿದೆ. ಆದರೆ ಪ್ರೌಢ ಶಿಕ್ಷಕರು ಶಾಲೆಗಳಿಗೆ ಮೇ 15ರಿಂದಲೇ ಆಗಮಿಸುತ್ತಿದ್ದಾರೆ. ಈ ರಜೆಯ ನಷ್ಟವನ್ನು ಸರಿದೂಗಿಸಲು ಸರಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕರಿಗೆ ಕಡಿತವಾಗುವ ಬೇಸಿಗೆ ರಜೆ ದಿನಗಳ ಬದಲಿಗೆ ಗಳಿಕೆ ರಜೆ ನೀಡಲು ಇಲಾಖೆ ತೀರ್ಮಾನಿಸಿದೆ.