ಬೆಳಗಾವಿ: ಬೆಳಗಾವಿ ತಾಲೂಕಿನ ಸುಳಗಾದಲ್ಲಿ ಇಂದು ಬೆಳಗ್ಗೆ ಸಿಲಿಂಡರ್ ಸ್ಪೋಟಗೊಂಡಿದ್ದು, ದಂಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಲ್ಲಪ್ಪ ಪಾಟೀಲ (62), ಸುಮನಾ ಪಾಟೀಲ(60) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಲ್ಲಪ್ಪ ಹಾಗೂ ಸುಮನ್ ಅವರಿಗೆ ಶೇ.70ರಷ್ಟು ಸುಟ್ಟ ಗಾಯಗಳಾಗಿವೆ. ಸ್ಥಳೀಯರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ.

ಇಂದು ನಸುಕಿನ 4 ಗಂಟೆ ಸುಮಾರಿಗೆ ಸುಮನ್‌ ಪಾಟೀಲ ಅವರು ಎದ್ದು, ಅಡುಗೆ ಮನೆಗೆ ಹೋಗಲು ಲೈಟ್ ಸ್ವಿಚ್ ಆನ್ ಮಾಡಿದ್ದಾರೆ. ಆಗ ಏಕಾಏಕಿ ಸಿಲಿಂಡರ್‌ ಬ್ಲಾಸ್ಟ್ ಆಗಿದೆ. ಗ್ಯಾಸ್‌ ಸಿಲಿಂಡರ್ ಸಮೀಪ ಹೋಗದಿದ್ದರೂ ಸ್ಫೋಟಗೊಂಡಿದೆ. ಗ್ಯಾಸ್‌ ಲಿಂಕ್‌ ಆಗಿದ್ದರಿಂದ ಏಕಾಏಕಿ ಲೈಟ್‌ ಆನ್‌ ಮಾಡಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್ ಸಿಡಿದ ತೀವ್ರತೆಗೆ ಮನೆಗೆ ಹಾನಿಯಾಗಿದೆ. ಸಿಲಿಂಡರ್ ಸ್ಫೋಟಗೊಂಡ ತೀವ್ರತೆಗೆ ಮನೆಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸ್ಫೋಟದ ತೀವ್ರತೆಗೆ ಜನತೆ ಬೆಚ್ಚಿಬಿದ್ದಿದ್ದಾರೆ. ಮನೆಯ ಇಂಟೀರಿಯರ್ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಟ್ರಜರಿ,ವಸ್ತ್ರ ದವಸ ಧಾನ್ಯಗಳು ಮನೆಯ ತುಂಬೆಲ್ಲ ಬಿದ್ದಿವೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.