ಬೆಳ್ತಂಗಡಿ : ಸಾವಿರ ಹಣ್ಣುಗಳಿರುವ ಕದಳಿ ಗೊನೆಯೊಂದನ್ನು ಬೆಳ್ತಂಗಡಿ ಗೇರುಕಟ್ಟೆಯ ಹೊಟೇಲ್‌ನಲ್ಲಿ ತೂಗು ಹಾಕಲಾಗಿದೆ. ಇದು ಇಲ್ಲಿಗೆ ಬಂದವರನ್ನೆಲ್ಲ ಸೆಳೆಯುತ್ತಿರುವುದು ವಿಶೇಷ.

ಕಳಿಯ ಗ್ರಾಮದ ಮೆದಿನ ರಾಜು ಶೆಟ್ಟಿ ಅವರ ತೋಟದಲ್ಲಿ ಬೆಳೆದ ಕದಳಿ ತಳಿಯ ಬಾಳೆಗೊನೆ ಇದಾಗಿದೆ. ಅವರು ಅದನ್ನು ಗೇರುಕಟ್ಟೆಯಲ್ಲಿನ ತನ್ನ ದೈವಾನುಗ್ರಹ ಹೊಟೇಲ್‌ನಲ್ಲಿ ತೂಗು ಹಾಕಿದ್ದಾರೆ. ಒಟ್ಟಾರೆ, ಇದೀಗ ಈ ಬಾಳೆಗೊನೆ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.