ಬೆಂಗಳೂರು : ಖ್ಯಾತ ಜ್ಯೋತಿಷಿಯೊಬ್ಬರು ಇದೀಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಭಾಗ್ಯ ಸಿಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಡಿಕೆಶಿ ರಾಜಕೀಯ ಬೆಳವಣಿಗೆಯ ಕುರಿತು ಖ್ಯಾತ ಜ್ಯೋತಿಷಿ ದ್ವಾರಕನಾಥ್ ಗುರೂಜಿ ಭವಿಷ್ಯ ನುಡಿದಿದ್ದು, ಒಂದೂವರೆ ವರ್ಷದ ಬಳಿಕ ಡಿಕೆಶಿ ಆಗುವುದು ನಿಶ್ಚಿತ ಎಂದು ಹೇಳಿದ್ದಾರೆ. ಡಿಕೆಶಿಗೆ ರಾಜಯೋಗವಿದ್ದು, ಸರ್ವ ಸಂಗ ಪರಿತ್ಯಾಗಿಯಾಗಿ ಅಧಿಕಾರ ನಡೆಸಿ ಚರಿತ್ರೆಯಲ್ಲಿ ಉಳಿಯುತ್ತಾರೆ ಎಂದಿದ್ದಾರೆ. ಮಹಾರಾಷ್ಟ್ರದಲ್ಲಿ ಸರ್ಕಾರ ಬದಲಾಗಲಿದೆ ಎಂದಿರುವ ಗುರೂಜಿ, ಕರ್ನಾಟಕ ಸರ್ಕಾರ 5 ವರ್ಷ ಅಧಿಕಾರ ಪೂರೈಸಲಿದೆ, ಅದನ್ನು ಬೀಳಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ.