ಗದಗ :
ಚಿತ್ರನಟ ಯಶ್ ಜನ್ಮದಿನದ ಅಂಗವಾಗಿ ಬೃಹತ್ ಕಟೌಟ್ ನಿಲ್ಲಿಸುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಮೂವರು ಯುವಕರು ಪ್ರಾತಪಟ್ಟಿದ್ದರು. ಇದರ ಬೆನ್ನಿಗೆ ಇದೀಗ ಮತ್ತೊಂದು ಅಘಾತಕಾರಿ ಸುದ್ದಿ ಬರ ಸಿಡಿಲಿನಂತೆ ಬಡಿದಿದೆ.

ಯಶ್ ಅವರು ನಿನ್ನೆ ಈ ಮೂವರು ಅಭಿಮಾನಿಗಳ ಸಾವಿನ ಹಿನ್ನೆಲೆಯಲ್ಲಿ
ಸೂರಣಗಿಯ ಅವರ ಮನೆಗೆ ಸಾಂತ್ವನ ಹೇಳಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ನೋಡಲು ಬಿಂಕದಕಟ್ಟಿಯ
ಎಂಜಿನಿಯರಿಂಗ್ ವಿದ್ಯಾರ್ಥಿ ನಿಖಿಲ್ ಸಹಾ ಬೈಕ್ ನಲ್ಲಿ ತೆರಳಿದ್ದರು. ನಿಖಿಲ್ ಬೈಕ್ ಯಶ್ ಅವರ ಭದ್ರತಾ ವಾಹನಕ್ಕೆ ಡಿಕ್ಕಿಹೊಡೆದ ಪರಿಣಾಮ ಗಾಯಗೊಂಡು
ಆಸ್ಪತ್ರೆಗೆ ದಾಖಲಾಗಿದ್ದ ಅವರು ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಗಾಯಗೊಂಡ ತಕ್ಷಣ ಅವರನ್ನು ಚಿಕಿತ್ಸೆಯಲಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.