ವಾರದ ಹಿಂದಷ್ಟೇ ಕಿತ್ತೂರಿನಲ್ಲಿ ಲೈನ್ ಮ್ಯಾನ್ ಒಬ್ಬರಿಗೆ ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟ ಸುದ್ದಿಯ ಬೆನ್ನಿಗೆ ಇದೀಗ ಖಾನಾಪುರ ತಾಲೂಕಿನ ಜುಂಜವಾಡ ಗ್ರಾಮದಲ್ಲಿ ರೈತರೊಬ್ಬರಿಗೆ ವಿದ್ಯುತ್ ತಗುಲಿ ಮೃತಪಟ್ಟ ಅಘಾತಕಾರಿ ಸುದ್ದಿ ವರದಿಯಾಗಿದೆ.

 

ಖಾನಾಪುರ :
ಖಾನಾಪುರ ತಾಲೂಕಿನ ಜುಂಜವಾಡ ಗ್ರಾಮದ ರೈತ ಧ್ಯಾನೇಶ್ವರ ಚನ್ನಪ್ಪ ಮಾಳವಿ (34) ವಿದ್ಯುತ್ ಸ್ಪರ್ಶಿಸಿ ಬುಧವಾರ ಮೃತಪಟ್ಟಿದ್ದಾರೆ.

ಖಾನಾಪುರ ತಾಲೂಕಿನ ಬೇಕವಾಡದಲ್ಲಿ ಜಮೀನಿನಲ್ಲಿ ಬೋರ್‌ವೆಲ್ ಹಾಕಲು ಹೋದ ಯುವಕನೋರ್ವ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ಹೊಲದಲ್ಲಿ ಮೆಣಸಿನಕಾಯಿ ಕೃಷಿ ಮಾಡುತ್ತಿದ್ದಾಗ ಬೋರ್ ವೆಲ್ ಪ್ರಾರಂಭವಾಗದ ಕಾರಣ ವಿದ್ಯುತ್ ಬಟನ್ ಮತ್ತು ಸ್ಟಾರ್ಟರ್ ತಪಾಸಣೆ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಏಕಾಏಕಿ ದೂರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರಿಗೆ ಪತ್ನಿ, ಪುತ್ರ, ಪುತ್ರಿ, ತಂದೆ- ತಾಯಿ ಇದ್ದಾರೆ.