ಬೆಳ್ವೆ : ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಅವಕಾಶಗಳಿದ್ದರೂ ಸಹ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿರುವ ನಿಟ್ಟಿನಲ್ಲಿ ದಾನಿಗಳು, ಹಳೆ ವಿದ್ಯಾರ್ಥಿಗಳು,ಪೋಷಕರ ಕೊಡುಗೆಗಳನ್ನು ಸದುಪಯೋಗಿಸಿಕೊಂಡು ಖಾಸಗಿ ಶಾಲೆಗಳಲ್ಲಿ ಸಿಗುವ
ಸೌಲಭ್ಯಗಳಿಗೂ ಮಿಗಿಲಾದ ಸೌಲಭ್ಯಗಳನ್ನು ಸರ್ಕಾರಿಗಳು ಹೊಂದಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ಸು ಕಾಣುತ್ತಿರುವುದು ಉತ್ತಮ ಬೆಳವಣೆಗೆಯಾಗಿದೆ ಎಂದು ಕುಂದಾಪುರ ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ
ಹೇಳಿದರು.

ಬೆಳ್ವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ,ರಾಜ್ಯ ಮತ್ತು ರಾಷ್ಟ್ರ ಮಟ್ಟದ
ಕ್ರೀಡಾಪಟುಗಳ ನಾಮಫಲಕ ಅನಾವರಣ,ಇಂಗ್ಲೀಷ್ ಭಾಷಾ ಕೊಠಡಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು. ಬೆಳ್ವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧ ಅಧ್ಯಕ್ಷತೆ ವಹಿಸಿ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದರು.
ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿ ಸೂರ‍್ಗೋಳಿ ಕಂಪ್ಯೂಟರ್ ತರಗತಿಯನ್ನು ಉದ್ಘಾಟಿಸಿದರು.
ಬೆಳ್ವೆ ಶ್ರೀಗಣೇಶ್ ಕ್ಯಾಶ್ಯೂ ಸಮೂಹ ಸಂಸ್ಥೆಗಳ ಉದ್ಯಮಿ ಬಿ.ಗಣೇಶ್ ಕಿಣಿ ಬೆಳ್ವೆ, ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜೇಶ್ವರಿ ಎ.ಜೆ, ಪ್ರಗತಿಪರ ಕೃಷಿಕ ರಾಮಚಂದ್ರ ಅಲ್ಸೆ ಸೆಟ್ಟೋಳಿ, ನಿವೃತ್ತ ಮುಖ್ಯ
ಶಿಕ್ಷಕ ಸುರೇಶ ಶೆಟ್ಟಿ ಬೆಳ್ವೆ, ಬೆಳ್ವೆ ಶ್ರೀ ಶಂಕರನಾರಾಯಣ
ದೇವಳದ ಮೊಕ್ತೇಸರ ಶಂಕರ ಶೆಟ್ಟಿ ಬೆಳ್ವೆ, ಬೆಳ್ವೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುರೇಂದ್ರ ನಾಯ್ಕ ಯಳಂತೂರು, ಮಾಜಿ ಅಧ್ಯಕ್ಷ ಉದಯಕುಮಾರ್ ಪೂಜಾರಿ
ಬೆಳ್ವೆ,ಎಸ್ ಚಂದ್ರಶೇಖರ್ ಶೆಟ್ಟಿ ಸೂರ‍್ಗೋಳಿ, ಸಮೂಹ
ಸಂಪನ್ಮೂಲ ವ್ಯಕ್ತಿ ಅನುಪ್‌ಕುಮಾರ್ ಶೆಟ್ಟಿ, ಆರ್ಡಿ, ಬೆಳ್ವೆ, ಗೋಳಿಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ವೈ. ಪಟ್ಟಾಭಿರಾಮ್ ಭಟ್ ಮರೂರು,ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ.ಸತೀಶ್ ಕಿಣಿ ಬೆಳ್ವೆ, ಕೋಟೇಶ್ವರ ಗೀತಾ ಎಚ್.ಎಸ್,ಎನ್ ಪೌಂಢೇಶನ್ ಸದಸ್ಯ
ಮುಸ್ತಾಕ್ ಅಹಮ್ಮದ್ ಬೆಳ್ವೆ, ಎಸ್‌ಡಿಎಂಸಿ ಅಧ್ಯಕ್ಷ ಅನ್ವರ್ ಹುಸೇನ್ ಅಲ್ಬಾಡಿ,
ಮುಖ್ಯ ಶಿಕ್ಷಕಿ ಶಿಕ್ಷಕಿ ಜಯಶ್ರೀ ಶೆಟ್ಟಿಗಾರ್ತಿ,ದೈಹಿಕ ಶಿಕ್ಷಣ
ಶಿಕ್ಷಕ ಕಿಶನ್‌ರಾಜ್ ಶೆಟ್ಟಿ ಬೆಳ್ವೆ, ಬೆಳ್ವೆ ಅಂಗನವಾಡಿ ಕೇಂದ್ರದ ನಿವೃತ್ತ ಕಾರ್ಯಕರ್ತೆ ಜಲಜಾ, ,
ಶಿಕ್ಷಕ ವೃಂದದವರು
ಉಪಸ್ಥಿತರಿದ್ದರು.

ಸುರೇಶ ಪೂಜಾರಿ ಬೆಳ್ವೆ ಸ್ವಾಗತಿಸಿದರು. ಗಣೇಶ
ಅರಸಮ್ಮಕಾನು ನಿರೂಪಿಸಿ ವಂದಿಸಿದರು.