
ರಾಯಬಾಗ: ಕಕ್ಷಿದಾರರು ತಮ್ಮ ತಮ್ಮಲ್ಲಿರುವ ವ್ಯಾಜ್ಯಗಳನ್ನು ಸಂಧಾನ ಮೂಲಕ ಬಗೆಹರಿಸಿಕೊಂಡು ನೆಮ್ಮದಿಯಿಂದ ಜೀವನ ನಡೆಸಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸಿರೊಟ್ಟಿ ಹೇಳಿದರು.
ಶನಿವಾರ ಪಟ್ಟಣದ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಬೃಹತ್ ಲೋಕ ಅದಾಲತ್ ನಲ್ಲಿ ಮಾತನಾಡಿದ ಅವರು ಈ ದಿನ ಒಟ್ಟು 1952 ವಿವಿಧ ಪ್ರಕರಣಗಳನ್ನು ಲೋಕ ಅದಾಲತದಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ. ಜೊತೆಗೆ ಎರಡು ವೈವಾಹಿಕ ಜೋಡಿಗಳನ್ನು ಒಂದು ಮಾಡಿ ಕಳುಹಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಾಕ್ಷ್ಯ ಚಿತ್ರ ಪ್ರದರ್ಶನಕ್ಕೆ ನ್ಯಾಯಾಧೀಶರು ಚಾಲನೆ ನೀಡಿದರು.
ಪ್ರಧಾನ ದಿವಾಣಿ ನ್ಯಾಯಾಧೀಶೆ ಪ್ರಿಯಾ ಭಟ್ಟಡ, ವಕೀಲರ ಸಂಘದ ಅಧ್ಯಕ್ಷ ಪಿ.ಎಮ್.ದರೂರ, ಸ.ಸ.ಅಭಿಯೋಜಕರಾದ ಮಹಾವೀರ ಗಂಡವ್ವಗೋಳ, ಹನಮಂತ ಅಚಮಟ್ಟಿ, ಎಸ್.ಬಿ.ಬಿರಾದಾರಪಾಟೀಲ, ಬಿ.ಕೆ.ಶಿಂಗಾಡೆ, ಯು.ಎನ್.ಉಮ್ರಾಣಿ, ಎ.ಬಿ.ಮಂಗಸೂಳೆ, ಎಸ್.ಕೆ.ರೆಂಟೆ, ಜಿ.ಎಸ್.ಪವಾರ, ಬಿ.ಬಿ.ಈಟಿ, ವಿ.ಎಸ್.ಪೂಜೇರಿ, ಎನ್.ಎಸ್.ಒಡೆಯರ, ಬಿ.ಆರ್.ಪಡಲಾಳೆ, ಅಜೀತ ಖಿಚಡೆ ಸೇರಿ ಹಿರಿಯ ಮತ್ತು ಕಿರಿಯ ವಕೀಲರು, ಕಕ್ಷಿದಾರರು ಇದ್ದರು.