ಕೊಪ್ಪಳ: ಹಟ್ಟಿಗೆ ನುಗ್ಗಿ ಕುರಿಗಳನ್ನು ತಿಂದು ಬಳಿಕ ಚಿರತೆ ಅಲ್ಲಿಯೇ ನಿದ್ದೆಗೆ ಜಾರಿದ ಘಟನೆ ಗಂಗಾವತಿ ತಾಲೂಕಿನ ಬಸವನ ದುರ್ಗ ಕ್ಯಾಂಪ್ನಲ್ಲಿ ನಡೆದಿದೆ. ಗುಡ್ಡದ ಮೇಲೆ ಕುರಿಗಾಯಿಗಳು ಹಟ್ಟಿಯಲ್ಲಿ ಕುರಿಗಳನ್ನು ಹಾಕಿದ್ದರು. ರಾತ್ರಿ ವೇಳೆ ಚಿರತೆ ಹಟ್ಟಿಗೆ ಬಂದಿದೆ. ಅಲ್ಲದೇ ಎರಡು ಕುರಿಗಳನ್ನು ತಿಂದು ಹಟ್ಟಿಯಲ್ಲಿಯೇ ಮಲಗಿದೆ. ಇದರ ವೀಡಿಯೋವನ್ನು ಕುರಿಗಾಹಿ ಸೆರೆಹಿಡಿದಿದ್ದಾರೆ.
ರಮೇಶ ಕುರುಬರ ಎಂಬವರಿಗೆ ಈ ಕುರಿಗಳು ಸೇರಿವೆ. ಅರಣ್ಯ ಇಲಾಖೆ ಸಿಬ್ಬಂದಿ ಹಟ್ಟಿಗೆ ಆಗಮಿಸುತ್ತಿದ್ದಂತೆಯೇ ಚಿರತೆ ತಪ್ಪಿಸಿಕೊಂಡು ಗುಡ್ಡದ ಕಡೆ ಓಡಿದೆ. ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.