ಬೆಳಗಾವಿ : ಬೆಂಗಳೂರಿನಿಂದ ಬೆಳಗಾವಿಗೆ ಭಾನುವಾರ ಸಂಜೆ ಬಂದ ಇಂಡಿಗೋ ವಿಮಾನ ಸಿಬ್ಬಂದಿಯ ಸುಮಾರು 22 ಕ್ಕೂ ಹೆಚ್ಚು ಪ್ರಯಾಣಿಕರ ಲಗೇಜ್ ನ್ನು ಬೆಂಗಳೂರಿನಲ್ಲೇ ಬಿಟ್ಟು ಬರಲಾಗಿತ್ತು. ಈ ಲಗೇಜ್ ಇಂದು ಬೆಳಗಾವಿ ಪ್ರಯಾಣಿಕರ ಮನೆಗಳಿಗೆ ತಲುಪಲಿದೆ.

ಈ ಬಗ್ಗೆ ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ತ್ಯಾಗರಾಜನ್ ಪ್ರತಿಕ್ರಿಯಿಸಿ, ವಿಮಾನದಲ್ಲಿ ಭಾರ ಹೆಚ್ಚಾಗುವ ವಿಷಯ ವಿಮಾನ ಟೇಕ್‌ ಆಫ್ ಆಗುವ ಕೆಲವೇ ಕ್ಷಣ ಮೊದಲು ಗೊತ್ತಾಗುತ್ತದೆ. ಆ ಸಂದರ್ಭದಲ್ಲಿ ಹೆಚ್ಚುವರಿ ಲಗೇಜ್‌ಗಳನ್ನು ಇಳಿಸಲಾಗುತ್ತದೆ. ಪ್ರಯಾಣಿಕರು ಹೊರಡುವ ಕ್ಷಣವಾಗಿರುವ ಕಾರಣ ಸಿಬ್ಬಂದಿಗೆ ಮುಂಚಿತವಾಗಿ ಮಾಹಿತಿ ನೀಡಲು ಸಾಧ್ಯವಾಗಿಲ್ಲ. ಬೆಂಗಳೂರಿನಲ್ಲೇ ಉಳಿದಿರುವ ಲಗೇಜ್ ಗಳನ್ನು ಆಯಾ ಪ್ರಯಾಣಿಕರ ಮನೆಗೆ ಇಂಡಿಗೋ ಸಂಸ್ಥೆ ಸೋಮವಾರ ತಲುಪಿಸಲಿದೆ ಎಂದರು.