ಬೆಳಗಾವಿ: ಒಬ್ಬ ಸಮರ್ಥ ಪ್ರಧಾನಿ ಇರುವ ಕಾರಣ ಕೋವಿಡ್ ಸಮಯದಲ್ಲಿ ಸಾಕಷ್ಟು ಸಾವು ನೋವುಗಳು ತಪ್ಪಿಸಲಾಯಿತು.‌ ಒಬ್ಬ ಸಮರ್ಥ ನಾಯಕ ಇರುವ ಕಾರಣ 2014 ರ ನಂತರ ಭಾರತ ಸದೃಢವಾಗಿ ಬೆಳೆದಿದೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ ಅಂಗವಾಗಿ ಬೆಳಗಾವಿಯ ಉದ್ದಮಬಾಗ ವಿಶ್ವಕರ್ಮ ಸೇವಾ ಸಂಘದಲ್ಲಿ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಆಡಳಿತದ 10 ವರ್ಷದಲ್ಲಿ ದೇಶವನ್ನು ಬಲಿಷ್ಠ ಪಡಿಸಿದ್ದಾರೆ.‌ ಕೋವಿಡ್ ಸಂದರ್ಭದಲ್ಲಿ ಮಾಸ್ಕ್ ಬೇರೆ ದೇಶದಿಂದ ತರಿಸಿಕೊಳ್ಳುವ ಪರಿಸ್ಥಿತಿ ಬಂದಿತು. ಆದರೆ ದೇಶದಲ್ಲಿಯೆ ಮಾಸ್ಕ್ ತಯಾರಿಸಲು ಉತ್ತೇಜನ ನೀಡಿಲಾಯಿತು.‌ ವಾಕ್ಸಿನ್ ಬೇರೆ ದೇಶದಿಂದ ತರಿಸಿಕೊಳ್ಳುವ ಪರಿಸ್ಥಿತಿ ಬಂದಿತು ಆದರೆ ಮೋದಿಯವರು ನಮ್ಮ ದೇಶದಲ್ಲಿಯೇ ವಾಕ್ಸಿನ್ ತಯಾರಿಸಲು ಉತ್ತೇಜನ ನೀಡಿದರು. ಮಹಾಮಾರಿ ಕೋವಿಡ್ ಸಂದರ್ಭದಲ್ಲಿ ದೇಶದ ಜನರಿಗೆ ಎರಡು ಸಲ ಉಚಿತವಾಗಿ ಲಸಿಕೆ ನೀಡುವ ಕೆಲಸ ಮೋದಿಯವರು ಮಾಡಿದರು. ಇದರಿಂದ ಬಹಳಷ್ಟು ಸಾವು ನೋವುಗಳು ದೇಶದಲ್ಲಿ ತಪ್ಪಿಸಲಾಯಿತು ಎಂದು ಹೇಳಿದರು.‌
ನಮ್ಮಲ್ಲಿ ಒಬ್ಬ ಸಮರ್ಥ ನಾಯಕ ಇರುವ ಕಾರಣ ಇದೆಲ್ಲವು ಸಾಧ್ಯ ಆಗಿದೆ. ಮುಂದುವರಿದ‌ ರಾಷ್ಟ್ರದಲ್ಲಿ ಮತ್ತು ಸಣ್ಣ ಸಣ್ಣ ದೇಶಗಳಲ್ಲಿಯೇ ಕೋವಿಡ್ ಲಸಿಕೆ ನೀಡಲು ಆಗಿಲ್ಲ.‌ ಆದರೆ ಮೋದಿಯವರು ನೂರಾರು ಕೋಟಿ ಜನರಿಗೆ ಉಚಿತವಾಗಿ ವಾಕ್ಸಿನ್ ನೀಡಿದ್ದಾರೆ. ಈ ಸಾಧನೆಯನ್ನು ಜಗತ್ತಿನ ಮತ್ತೊಬ್ಬ ಯಾವ ನಾಯಕನಿಗೂ ಮಾಡಲು ಆಗುವುದಿಲ್ಲ.‌ ಹಾಗಾಗಿ ದೇಶಕ್ಕೆ ಮೋದಿಯವರು ಅಗತ್ಯ ಇದ್ದಾರೆ.‌ ಮೋದಿಯವರು ಪ್ರಧಾನಿಯಾದ ಮೇಲೆ ದೇಶಕ್ಕೆ ಶಾಂತಿ ನೆಮ್ಮದಿ ಸಿಕ್ಕಿದೆ.‌ ದೇಶಕ್ಕೆ ಭದ್ರತೆ ಸಿಕ್ಕಿದೆ. ನಮ್ಮನ್ನು ನಾವು ಸಂರಕ್ಷಣೆ ಮಾಡುತ್ತಿದ್ದೇವೆ. ಜಗತ್ತಿನಲ್ಲಿ ಇರುವ ಎಲ್ಲಾ ರಾಷ್ಟ್ರಗಳಲ್ಲೂ ನರೇಂದ್ರ ಮೋದಿಯವರ ಬಗ್ಗೆ ಗೌರವ ಇದೆ. ಮೋದಿಯವರು ಉತ್ತಮವಾದ ಆರ್ಥಿಕ ನೀತಿ, ಉತ್ತಮವಾದ ವಿದೇಶಿ ನೀತಿ ಮಾಡಿದ್ದರಿಂದ ದೇಶ ಪ್ರಗತಿ ಕಂಡಿದೆ.‌ ನಮ್ಮ ದೇಶದ ನೇರಯ ರಾಷ್ಟ್ರಗಳಾದ ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಅಪಘಾನಿಸ್ಥಾನ ದೇಶಗಳು ಆರ್ಥಿಕವಾಗಿ ಕುಸಿದು ಬಿದ್ದಿದೆ.‌ ಆ ದೇಶಗಳಿಗೆ ಸರಿಯಾದ ನಾಯಕ, ಹಾಗೂ ದುರದೃಷ್ಟಿ ಇಲ್ಲದ ಕಾರಣ ಆ ದೇಶಗಳು ಅಭಿವೃದ್ಧಿ ಹೊಂದಿಲ್ಲ ಎಂದರು.‌

ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಮೈಕ್ರೋ ಇಂಡಸ್ಟ್ರೀಸ್, ಸ್ಮಾಲ್ ಸ್ಕೇಲ್ ಇಂಡಸ್ಟ್ರಿ ಯನ್ನು ಒಟ್ಟುಗುಡಿಸಿ ಸಂಘಟನೆ ಮಾಡುವ ಕೆಲಸ ವಿಶ್ವ ಕರ್ಮ ಸೇವಸ ಸಂಘ ಮಾಡಿದೆ. ಸಣ್ಣ ಸಣ್ಣ ಕೈಗಾರಿಗೆ ಹೋಗಿ ಅಲ್ಲಿರುವ ಮಾಲೀಕರು, ಕಾರ್ಮಿಕರು, ಸಿಬ್ಬಂದಿ ಹೀಗೆ ಸುಮಾರು 16 ಸಾವಿರ ಜನರ ಸೇರಿಸಿ ಸಂಘಟನೆಯನ್ನು ಮಾಡಲಾಗಿದೆ. ರಾಜ್ಯದಲ್ಲಿಯೇ ಮೊದಲ ಸಲ ಸಣ್ಣ ಸಣ್ಣ ಕೈಗಾರಿಕೆಗಳನ್ನು ಒಟ್ಟುಗೂಡಿಸಿ ಅವರಿಗೆ ಸಹಾಯ ಮಾಡುವ ಮೂಲಕ ವಿಶ್ವಕರ್ಮ ಸೇವಾ ಸಂಘಟನೆ ಉತ್ತಮ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.‌

ಶಾಸಕ ಅಭಯ ಪಾಟೀಲ, ಸಂಘದ ಅಧ್ಯಕ್ಷ ರಮೇಶ ದೇಸೂರಕರ, ಪ್ರಮುಖರಾದ ಸಂದೀಪ ಮಂಡೋಳಕರ, ರಾಜು ಸುತಾರ, ನಾಮದೇವ ಸುತಾರ, ಗೀತಾ ಸುತಾರ, ನೇಹಾ ದೇಸೂರಕರ, ವಿಲಾಸ ಲೋಹಾರ ಹಾಗೂ ಇತರರು ಉಪಸ್ಥಿತರಿದ್ದರು.