ಪಾಟ್ನಾ:
ಮುಂಬೈ ವಿರುದ್ಧದ ಪಂದ್ಯದ
ಮೂಲಕ ಬಿಹಾರ ತಂಡಕ್ಕೆ 12 ವರ್ಷದ ವೈಭವ್‌ ಸೂರ್ಯವಂಶಿ ರಣಜಿ ಪಾದಾರ್ಪಣೆ ಮಾಡಿದ್ದಾರೆ.

ಈ ಮೂಲಕ ಪ್ರಥಮ ಕ್ರಿಕೆಟ್‌ಗೆ ದರ್ಜೆ ಪಾದಾರ್ಪಣೆ ಮಾಡಿದ ಭಾರತದ 4ನೇ ಅತಿ ಕಿರಿಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಆದರೆ ವೈಭವ್ ವಿರುದ್ಧ ಹಲವರು ಎಕ್ಸ್ ಮೂಲಕ ವಯೋ ವಂಚನೆ ಆರೋಪ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಕಳೆದ ವರ್ಷ ವೈಭವ್, ತಾವು 2023ರ ಸೆಪ್ಟೆಂಬರ್‌ನಲ್ಲಿ 14 ವರ್ಷಕ್ಕೆ ಕಾಲಿಡುತ್ತೇನೆ ಎಂದು ಹೇಳಿರುವ ಸಂದರ್ಶನದ ವಿಡಿಯೋ ವೊಂದನ್ನು ಹಲವರು ಹಂಚಿಕೊಂಡಿದ್ದಾರೆ. ಆದರೆ ಬಿಸಿಸಿಐ ದಾಖಲೆಗಳ ಪ್ರಕಾರ ವೈಭವ್ ವಯಸ್ಸು 12 ವರ್ಷ, 284 ದಿನ.