ಬೆಳಗಾವಿ : ಕಡಬಟ್ಟಿ-ಕನಸಗೇರಿ ರಸ್ತೆಯಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿ ಪೊಲೀಸ್ ಪೇದೆ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಸಂಜೆ ಜರುಗಿದೆ.

ಪುಂಡಲೀಕ ಯಲ್ಲಪ್ಪ ದಾನವ್ವಗೋಳ ಮೃತ ಪೊಲೀಸ್ ಪೇದೆ. ಇಲಾಖೆಯ ಕೆಲಸದ ಹಿನ್ನೆಲೆ ಬೆಳಗಾವಿಗೆ ತೆರಳಿ ಮರಳಿ ಗೋಕಾಕ ನಗರಕ್ಕೆ ಆಗಮಿಸುವ ಸಂದರ್ಭದಲ್ಲಿ ಈ ಅಪಘಾತ ಜರುಗಿದೆ.

ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಿಗೆ ಪತ್ನಿ, ಓರ್ವ ಪುತ್ರ, ನಾಲ್ವರು ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವಿದೆ. ಕಳೆದ 16 ವರ್ಷ ಗಳಿಂದ ಪೊಲೀಸ್‌ ಇಲಾಖೆಯಲ್ಲಿ ಸೇವೆಯಲ್ಲಿದ್ದರು. ಬೆಂಗಳೂರು, ಮೂಡಲಗಿ, ಗೋಕಾಕ ಸೇರಿದಂತೆ ಇತರೆ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವ ಹಿಸಿದ್ದಾರೆ. ಕಳೆದ 4 ವರ್ಷಗಳಿಂದ ಗೋಕಾಕ ಗ್ರಾಮೀಣ ಹಾಗೂ ಗೋಕಾಕ ಶಹರ ಠಾಣೆಯಲ್ಲಿ ಸೇವೆ ಸಲ್ಲಿಸಿತ್ತಿದ್ದರು, ಸದ್ಯ ಗೋಕಾಕ ಶಹರ ಠಾಣೆಯಲ್ಲಿ ಸೇವೆಯಲ್ಲಿದ್ದರು.