ಬೆಳಗಾವಿ: ಕುತ್ತಿಗೆ ಮುರಿತಕ್ಕೆ ಒಳಗಾಗಿದ್ದ ಬಡ ಕಾರ್ಮಿಕ ವ್ಯಕ್ತಿಯೊಬ್ಬರು ಯಶಸ್ವಿ ಸರ್ವಿಕಲ್ ಶಸ್ತ್ರಚಿಕಿತ್ಸೆ ಮೂಲಕ ಮರು ಜೀವ ಪಡೆದಿದ್ದಾರೆ.
ನಗರದ ಶ್ರೀ ಆರ್ಥೋ ಮತ್ತು ಟ್ರಾಮಾ ಕೇಂದ್ರದ ನುರಿತ ವೈದ್ಯ ಡಾ. ಐ. ದೇವಗೌಡ ಈ ಅಪರೂಪದ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಗಮನ ಸೆಳೆದಿದ್ದಾರೆ. ಎರಡು ಹೆಣ್ಣುಮಕ್ಕಳ ಬಡ ಕಾರ್ಮಿಕ ತಂದೆಗೆ ಜೀವದಾನ ನೀಡಿದ್ದಾರೆ. ಹುಕ್ಕೇರಿ ಮೂಲದ ಇಜಾಜ ಅಹ್ಮದ್ ಶೇಖ್ ಎಂಬುವವರು ಕಾರ್ಮಿಕರಾಗಿದ್ದು, ಬಸ್ತವಾಡ ಗ್ರಾಮದಲ್ಲಿ ಕೆಲಸದಲ್ಲಿ ನಿರತರಾಗಿದ್ದಾಗ ಆಕಸ್ಮಿಕ ಭಾರದ ವಸ್ತು ಅವರ ಮೇಲೆ ಮುರಿದು ಬಿದ್ದು ತೀವ್ರ ಆಘಾತಕ್ಕೆ ಒಳಗಾಗಿದ್ದರು.
ಚೇತರಿಸಿಕೊಳ್ಳಲು ಆಗದ ಪರಿಸ್ಥಿತಿಯಲ್ಲಿ ಕಂಡುಬಂದಿದ್ದ ಕಾರ್ಮಿಕನಿಗೆ ಅಪರೂಪದ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸಿದ್ದು ಕುಟುಂಬದ ಸಂತಸಕ್ಕೆ ಕಾರಣವಾಗಿದೆ.
ಆಂಟಿರಿಯರ್ ಸರ್ವಿಕಲ್ ಡಿಸೆಕ್ಟಮಿ ಮತ್ತು ಫ್ಯೂಶನ್ ಉಪಕ್ರಮದ ಎರಡು ಗಂಟೆಯ ಶಸ್ತ್ರಚಿಕಿತ್ಸೆ ಮೂಲಕ ಸ್ಪೈನಲ್ ಕಾರ್ಡ್
ಸರಿಪಡಿಸಿದ್ದಾರೆ. ಯಾವುದೇ ಬಗೆಯ ಟ್ರಾಮಾ ಸಂಬಂಧಿತ ಅತ್ಯಾಧುನಿಕ ಚಿಕಿತ್ಸೆಗಳು ಇಂದು ಲಭ್ಯವಿವೆ. ಜನತೆ ದುಗುಡ ಪಡುವ ಅಗತ್ಯವಿಲ್ಲ ಎಂದು ಡಾ. ಐ. ದೇವಗೌಡ ತಿಳಿಸಿದ್ದಾರೆ.