ಬೆಳಗಾವಿ : ದ್ವಿಚಕ್ರ ವಾಹನದಲ್ಲಿ ವೇಗವಾಗಿ ಬಂದ ವ್ಯಕ್ತಿ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

ಸಂಜೆ 5.15 ಕ್ಕೆ ಗಂಟೆಗೆ ಹನುಮಾನನಗರ ಸರ್ಕಲ್ ನ ಇಂಡಿಯನ್ ಸ್ಟೀಲ್- ಸಿಮೆಂಟ್ ಅಂಗಡಿ ಎದುರಿನಲ್ಲಿ ಈ ದುರ್ಘಟನೆ ನಡೆದಿದೆ.
ತಿರುಪತಿ ಟ್ರಾವೆಲ್ ಚಾಲಕನಾಗಿರುವ KA 24, HN 6068 ವಾಹನದಲ್ಲಿ ಬಂದ ಬೈಲಹೊಂಗಲ ತಾಲೂಕಿನ ಜಕನಾಯಕನ ಕೊಪ್ಪ ಗ್ರಾಮದ
ಫಕೀರಪ್ಪ ಭೀಮಪ್ಪ ಚಚಡಿ (40) ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟ್ರಾಫಿಕ ಪೊಲೀಸ್ ಸಿಬ್ಬಂದಿ ಹಾಜರಿದ್ದು ಪ್ರಾಥಮಿಕ ತನಿಖೆ ನಡೆಸಿದರು.