ನವದೆಹಲಿ: ದೆಹಲಿ ತೀವ್ರತರವಾದ ಶಾಖದ ಅಲೆಯಲ್ಲಿ ತತ್ತರಿಸುತ್ತಿರುವಾಗ, ಬುಧವಾರ ಮಾಧ್ಯಮ ವರದಿಗಳು ಮುಂಗೇಶಪುರದಲ್ಲಿ ಗರಿಷ್ಠ 52.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ವರದಿ ಮಾಡಿವೆ. ಇದು ನಗರದಲ್ಲಿ ದಾಖಲಾದ ಅತ್ಯಧಿಕ ತಾಪಮಾನವಾಗಿದೆ. ಆದಾಗ್ಯೂ, ಭಾರತೀಯ ಹವಾಮಾನ ಇಲಾಖೆ (IMD), ಸೆನ್ಸರ್‌ನಲ್ಲಿನ ದೋಷ ಅಥವಾ ಸ್ಥಳೀಯ ಅಂಶದಲ್ಲಿನ ದೋಷ” ಎಂದು ನಂತರ ಸ್ಪಷ್ಟಪಡಿಸಿದೆ. ಹಾಗೂ ಡೇಟಾ ಮತ್ತು ಸೆನ್ಸರ್‌ಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಐಎಂಡಿ (IMD) ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
“ದೆಹಲಿ-ಎನ್‌ಸಿಆರ್‌ನಲ್ಲಿನ ಗರಿಷ್ಠ ತಾಪಮಾನವು ನಗರದ ವಿವಿಧ ಭಾಗಗಳಲ್ಲಿ 45.2 ಡಿಗ್ರಿ ಸೆಲ್ಸಿಯಸ್‌ನಿಂದ 49.1 ಡಿಗ್ರಿ ಸೆಲ್ಸಿಯಸ್‌ ವರೆಗೆ ಬದಲಾಗಿದೆ. ಇತರ ಭಾಗಗಳಿಗೆ ಹೋಲಿಸಿದರೆ ಆದರೆ ಮುಂಗೇಶಪುರದಲ್ಲಿ 52.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ವರದಿ ಮಾಡಿದೆ. ಇದು ಸಂವೇದಕದಲ್ಲಿನ ದೋಷ ಅಥವಾ ಸ್ಥಳೀಯ ಅಂಶದಿಂದಾಗಿರಬಹುದು. ಐಎಂಡಿ ಡೇಟಾ ಮತ್ತು ಸೆನ್ಸರ್‌ಗಳನ್ನು ಪರಿಶೀಲಿಸುತ್ತಿದೆ ಎಂದು ಐಎಂಡಿ ಹೇಳಿಕೆಯಲ್ಲಿ ತಿಳಿಸಿದೆ. ಮುಂದಿನ 2-3 ದಿನಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಬಿಸಿಗಾಳಿ ಕಡಿಮೆಯಾಗಲಿದೆ ಎಂದು ಅದು ಹೇಳಿದೆ.

“ದೆಹಲಿಯ ಹಲವು ಸ್ಥಳಗಳಲ್ಲಿ ಮಧ್ಯಾಹ್ನದ ನಂತರ ತಾಪಮಾನವು ಮತ್ತಷ್ಟು ಕುಸಿತಕ್ಕೆ ಕಾರಣವಾಯಿತು. ಮುಂದಿನ 2 – 3 ದಿನಗಳಲ್ಲಿ ಅರೇಬಿಯನ್ ಸಮುದ್ರದಿಂದ ವಾಯುವ್ಯ ಭಾರತದವರೆಗೆ ಮಳೆ/ಗುಡುಗು ಸಹಿತ ನೈಋತ್ಯ ಗಾಳಿ ಬೀಸುವಿಕೆಯಿಂದಾಗಿ ಶಾಖದ ಅಲೆಗಳು ಕಡಿಮೆಯಾಗುತ್ತವೆ ಎಂದು ಐಎಂಡಿ (IMD) ಹೇಳಿದೆ.
ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಕೂಡ ಎಕ್ಸ್‌ ನಲ್ಲಿ, ದೆಹಲಿಯಲ್ಲಿ 52.3 ಡಿಗ್ರಿ ಸೆಲ್ಸಿಯಸ್ ತಾಪಮಾನವು ಅಸಂಭವವಾಗಿದೆ ಎಂದು ಹೇಳಿದ್ದಾರೆ.

“ಐಎಂಡಿಯಲ್ಲಿರುವ ನಮ್ಮ ಹಿರಿಯ ಅಧಿಕಾರಿಗಳಿಗೆ ಈ ವರದಿಯನ್ನು ಪರಿಶೀಲಿಸಲು ಕೇಳಲಾಗಿದೆ. ಸದ್ಯದಲ್ಲೇ ಅಧಿಕೃತವಾಗಿ ಇದರ ಬಗ್ಗೆ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ದೆಹಲಿ ಸೇರಿದಂತೆ ಉತ್ತರ ಭಾರತದ ದೊಡ್ಡ ಪ್ರದೇಶಗಳು ಕಳೆದ ಕೆಲವು ದಿನಗಳಿಂದ ಶಾಖದ ಅಲೆಯಿಂದ ತತ್ತರಿಸುತ್ತಿವೆ, ದೆಹಲಿಯ ಕನಿಷ್ಠ ಮೂರು ಹವಾಮಾನ ಕೇಂದ್ರಗಳಾದ ಮುಂಗೇಶಪುರ, ನರೇಲಾ ಮತ್ತು ನಜಾಫ್‌ಗಢದಲ್ಲಿ ಮಂಗಳವಾರವೂ ಸುಮಾರು 50 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಆದಾಗ್ಯೂ, ರಾಜಧಾನಿ ನಗರವು ಬುಧವಾರ ಮಧ್ಯಾಹ್ನ ಹವಾಮಾನದಲ್ಲಿ ಹಠಾತ್ ಬದಲಾವಣೆಗೆ ಸಾಕ್ಷಿಯಾಯಿತು ಮತ್ತು ಹಲವಾರು ಪ್ರದೇಶಗಳಲ್ಲಿ ಲಘು ಮಳೆಯಾಗಿದೆ.