ಬೆಳಗಾವಿ : ಬೆಳಗಾವಿ ನಗರ ವಲಯದ ಅಂಜುಮನ್ ಪರೀಕ್ಷಾ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಗಣಿತ ವಿಷಯ ಬರೆಯುತ್ತಿರುವಾಗ ವಿದ್ಯಾರ್ಥಿನಿ ಅನಾರೋಗ್ಯದ ಕಾರಣ ಪ್ರಜ್ಞೆ ತಪ್ಪಿದಳು.

ಈ ಸಂದರ್ಭದಲ್ಲಿ ಕೊಠಡಿ ಮೇಲ್ವಿಚಾರಕರು ಹಾಗೂ ಮುಖ್ಯ ಅಧೀಕ್ಷಕಎಸ್.ಎಸ್. ಹಾದಿಮನಿ ಹಾಗೂ ಪರೀಕ್ಷಾ ಉಸ್ತುವಾರಿ ಅಧಿಕಾರಿಗಳಾದ ಎಲ್.ಎಸ್.ಹಿರೇಮಠ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಆಯ್.ಡಿ.ಹಿರೇಮಠ ಕ್ಷೇತ್ರ ಸಮನ್ವಯಾಧಿಕಾರಿಗಳು ಆರೋಗ್ಯ ವಿಚಾರಿಸಿ, ಕಾಳಜಿ ವಹಿಸಿ 108 ಕ್ಕೆ ಕರೆ ಮಾಡಿ ವಿದ್ಯಾರ್ಥಿನಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಉಪಚರಿಸಿ ವಿದ್ಯಾರ್ಥಿನಿಗೆ ಮರಳಿ ಪರೀಕ್ಷೆ ಬರೆಯಲು ಅವಕಾಶ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿನಿಗೆ ಆರೋಗ್ಯ ವಿಚಾರಿಸಿ ಧೈರ್ಯ, ಪ್ರೋತ್ಸಾಹಕ ನುಡಿ ತಿಳಿಸಿ ಶುಭ ಹಾರೈಸಿದರು. ಇದರಿಂದ ಸಾರ್ವಜನಿಕರು ಅಧಿಕಾರಿಗಳ ಬಗ್ಗೆ ಪ್ರಶಂಸೆ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು.