ಬೆಳಗಾವಿ : ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ನಾಳ ಗ್ರಾಮದ ಕೃಷಿಕರೊಬ್ಬರ ಹೊಲದಲ್ಲಿರುವ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಕೃಷಿ ಹೊಂಡದ ನೀರು ತರಲು ಯುವಕರಿಬ್ಬರು ರವಿವಾರ ಹೋಗಿದ್ದಾರೆ. ಈ ಸಂದರ್ಭದಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ. ಕನ್ನಾಳ ಗ್ರಾಮದ ಸಿದ್ದಲಿಂಗ ಸಿದ್ದರಾಮ ಹಿರೇ ಕುರುಬರ- 19 ಮತ್ತು ಮುಧೋಳ ತಾಲೂಕಿನ ವೆಂಕಟಾಪುರ ಗ್ರಾಮದ ಆಕಾಶ ನಿಂಗಪ್ಪ ತುಂಗಳ-6 ಮೃತಪಟ್ಟವರು. ಇವರಿಬ್ಬರು ಕೃಷಿಹೊಂಡದಲ್ಲಿರುವ ನೀರನ್ನು ಕ್ಯಾನಿನಲ್ಲಿ ತುಂಬಿಕೊಳ್ಳುತ್ತಿರುವಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದು, ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.