ಚಿಕ್ಕೋಡಿ :
ಮದುವೆ ಅರಿಶಿನ ಹಚ್ಚುತ್ತಾರೆ ಎಂದು ತಪ್ಪಿಸಿಕೊಳ್ಳಲು ಹೋಗುವ ವೇಳೆ ಆಯತಪ್ಪಿ ಬಾವಿಗೆ ಬಿದ್ದು ಯುವಕ ಮೃತಪಟ್ಟ ಘಟನೆ ಸೇರಿ ಚಿಕ್ಕೋಡಿ ತಾಲೂಕಿನ ಸೇರಿಕೋಡಿ ತೋಟದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.

ಪಟ್ಟಣದ ಮಾಳಪ್ಪ ಮಾರುತಿ ಬಾಡದ (18) ಮೃತ ಯುವಕ. ಕಬ್ಬೂರ ಪಟ್ಟಣದಲ್ಲಿ ಜ.2 ರಂದು ಸೇರಿಕೋಡಿಯಲ್ಲಿ ಕುರಬೇಟ ಬಂಧುಗಳ ಮದುವೆ ಇತ್ತು. ಗುರುವಾರ ರಾತ್ರಿ ಅರಿಶಿನ ಶಾಸ್ತ್ರವಿತ್ತು, ಮಾಳಪ್ಪನ ಮನೆಯೂ ಕುರಬೇಟ ಬಂಧುಗಳ ಮನೆಯ ಪಕ್ಕದಲ್ಲಿದೆ. ಸ್ನೇಹಿತರು ತನಗೂ ಅರಿಶಿನ ಹಚ್ಚುತ್ತಾರೆ ಎಂದು ತಪ್ಪಿಸಿಕೊಳ್ಳಲು ಹೋದಾಗ ಈ ದುರ್ಘಟನೆ ನಡೆದಿದೆ. ಘಟನೆಯಿಂದ ಮದುವೆ ರದ್ದಾಯಿತು. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.