ಬೆಳಗಾವಿ: ಸಾಕುನಾಯಿಯನ್ನು ತೆಗೆದುಕೊಂಡು ಹೋದಾಗ ನಾಲ್ಕನೇ ಮಹಡಿಯ ಟೆರೇಸ್ ನಿಂದ ಬಿದ್ದಿದ್ದರಿಂದ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮೃತ ಯುವತಿಯನ್ನು ಓಶಾನಾ ರೊನಾಲ್ಡೊ ಪಚೆಕೊ (21) 6ನೇ ಕ್ರಾಸ್, ಸದಾಶಿವನಗರ, ಬೆಳಗಾವಿ ಎಂದು ಗುರುತಿಸಲಾಗಿದೆ.

ಸದಾಶಿವನಗರದ ಓಂ ರೆಸಿಡೆನ್ಸಿ ಅಪಾರ್ಟ್ ಮೆಂಟ್ ನಲ್ಲಿ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಈ ದುರ್ಘಟನೆ
ಸಂಭವಿಸಿದೆ. ಓಷ್ನಾ ಬಿಬಿಎ ವಿದ್ಯಾರ್ಥಿನಿ. ಸದಾಶಿವನಗರದ ಓಂ ರೆಸಿಡೆನ್ಸಿಯ ಎರಡನೇ ಮಹಡಿಯ ಫ್ಲಾಟ್‌ನಲ್ಲಿ ಕುಟುಂಬದೊಂದಿಗೆ ವಾಸವಿದ್ದಳು. ಮನೆಯಲ್ಲಿ ಸಾಕು ನಾಯಿಯಿದ್ದು, ರಾತ್ರಿ ವೇಳೆ ನಾಯಿಯೊಂದಿಗೆ ನಾಲ್ಕನೇ ಮಹಡಿಯ ಟೆರೇಸ್‌ಗೆ ಹೋಗಿದ್ದಳು. ಬುಧವಾರ ರಾತ್ರಿ 8.30ರ ಸುಮಾರಿಗೆ ಮನೆಯವರಿಗೆ ವಿಷಯ ತಿಳಿಸಿ ತಾರಸಿಗೆ ಹೋಗಿದ್ದಳು. ನಾಯಿಯೊಂದಿಗೆ ಹೋದಾಗ ಏಕಾಏಕಿ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ. ಅದೇ ಸಂದರ್ಭದಲ್ಲಿ ಹೊರಗೆ ಹೋಗಿದ್ದ ಆಕೆಯ ಸಹೋದರ ಲಿಯಾನ್ ಅಪಾರ್ಟ್ ಮೆಂಟ್ ಗೆ ಬರುತ್ತಿದ್ದ. ಅವಳು ಅವನ ಮುಂದೆಯೇ ನಾಲ್ಕನೇ ಮಹಡಿಯಿಂದ ಬಿದ್ದಳು. ತಕ್ಷಣವೇ ಯುವತಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಘಟನೆ ಕುರಿತು ಎಪಿಎಂಸಿ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸ್ ಇನ್ಸ್‌ಪೆಕ್ಟರ್ ಖ್ವಾಜಾ ಹುಸೇನ್ ತನಿಖೆ ನಡೆಸುತ್ತಿದ್ದಾರೆ.