ಆಗುಂಬೆ : ಕಾಣೆಯಾಗಿದ್ದ ಯುವತಿಯೊಬ್ಬಳು ಶವವಾಗಿ ಪತ್ತೆಯಾದ ಘಟನೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೂಜಾ.ಎ.ಕೆ (24) ಕೊಲೆಯಾದ ಯುವತಿ.

ಕಳೆದ ಜೂ.30ರಂದು ಮನೆಯಿಂದ ಕೆಲಸಕ್ಕೆ ಹೋಗಿದ್ದ ಪೂಜಾ ಏಕಾಏಕಿ ಕಾಣೆಯಾಗಿದ್ದಳು. ಮನೆಗೆ ವಾಪಸ್ ಬರದ ಹಿನ್ನೆಲೆಯಲ್ಲಿ ಪೂಜಾ ಪೋಷಕರು ಆತಂಕಗೊಂಡು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಬಳಿಕ ಆಗುಂಬೆ ಪೊಲೀಸ್ ಠಾಣೆಯಲ್ಲಿ ತಂದೆ ಕುಶಾಲ್ ಮಿಸ್ಸಿಂಗ್‌ ಕಂಪ್ಲೇಟ್‌ ಕೊಟ್ಟಿದ್ದರು.

ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಗಿಳಿದಾಗ ಪೂಜಾಳ ಶವವು ಪತ್ತೆಯಾಗಿತ್ತು. ಬಳಿಕ ಆಕೆಯ ಫೋನ್‌ ಕಾಲ್‌ ಲಿಸ್ಟ್‌ ತೆಗೆದು ಮಿಸ್ಸಿಂಗ್‌ ಆದ ಕೊನೆ ದಿನ ಯಾರೆಲ್ಲ ಕರೆ ಮಾಡಿದ್ದರು ಅವರನ್ನೆಲ್ಲ ಪೊಲೀಸರು ವಿಚಾರಣೆ ನಡೆಸಿದ್ದರು.

ಈ ವೇಳೆ ಹಲವು ವರ್ಷಗಳಿಂದ ಸ್ನೇಹಿತನಾಗಿದ್ದ ಮಣಿಕಂಠ ಎಂಬಾತನಿಂದಲೇ ಪೂಜಾ ಕೊಲೆಯಾಗಿದ್ದಳು. ಪೊಲೀಸರು ತಮ್ಮದೇ ಸ್ಟೈಲ್‌ನಲ್ಲಿ ವಿಚಾರಣೆ ನಡೆಸಿದಾಗ ಪೂಜಾಳನ್ನು ಕೊಂದಿದ್ದಾಗಿ ಮಣಿಕಂಠ ಒಪ್ಪಿಕೊಂಡಿದ್ದಾನೆ. ಹಣಕಾಸಿ‌ ವಿಚಾರಕ್ಕೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ.

ಸದ್ಯ ಆಗುಂಬೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಯಿಂದ ಮತ್ತಷ್ಟು ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ