ದೆಹಲಿ:
ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಹೊಸ ಮೂರು ಕ್ರಿಮಿನಲ್‌ ಕಾನೂನುಗಳ ಮಸೂದೆಗಳಿಗೆ ಅಂಗೀಕಾರ ದೊರೆತಿದೆ.

ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023, ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023 ಮಸೂದೆಗಳಿಗೆ ಅಂಗೀಕಾರ ದೊರೆತಿದೆ.

ಭಾರತೀಯ ದಂಡ ಸಂಹಿತೆ 1860, ಕ್ರಿಮಿನಲ್ ಪ್ರೊಸೀಜರ್ (CrPC) 1973 ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್, 1872 ಬದಲಾಯಿಸಿ ಹೊಸ ಮಸೂದೆ ಮಂಡಿಸಲಾಗಿದೆ.

ಭದ್ರತಾ ಉಲ್ಲಂಘನೆ ವಿಚಾರದಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ 143 ವಿರೋಧ ಪಕ್ಷದ ಸದಸ್ಯರನ್ನು ಅಮಾನತುಗೊಳಿಸಿದ ಬಳಿಕ ನಡೆಯುತ್ತಿರುವ ಪ್ರತಿಭಟನೆಯ ನಡುವೆ ಮಸೂದೆಗಳನ್ನು ಅಂಗೀಕರಿಸಲಾಯಿತು.

ಬುಧವಾರ ಲೋಕಸಭೆಯಲ್ಲಿ ಮಸೂದೆಗಳ ಮೇಲಿನ ಚರ್ಚೆಗೆ ಉತ್ತರಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಹೊಸ ಮಸೂದೆಗಳು ಭಾರತೀಯತೆ, ಭಾರತೀಯ ಸಂವಿಧಾನ ಮತ್ತು ಜನರ ಯೋಗಕ್ಷೇಮಕ್ಕೆ ಒತ್ತು ನೀಡುತ್ತವೆ ಎಂದು ಹೇಳಿದರು.

ಕೆಲ ಕಾನೂನುಗಳ ಕುರಿತಗೊಂದಲವನ್ನು ನಿವಾರಿಸಿ ಸ್ಪಷ್ಟತೆ ನೀಡಲಾಗಿದೆ. ಕ್ರಿಮಿನಲ್‌ಗಳು, ಅತ್ಯಾಚಾರಿಗಳು, ದೇಶದ್ರೋಹಿಗಳಿಗೆ ಗರಿಷ್ಠ ಶಿಕ್ಷೆಯ ಖಾತರಿಯನ್ನು ಮಸೂದೆ ನೀಡುತ್ತದೆ ಎಂದು ಮಸೂದೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ನಡೆದ ಸುದೀರ್ಘ ಚರ್ಚೆ ಬಳಿಕ ಉತ್ತರಿಸಿದ್ದಾರೆ.

ಬದಲಾವಣೆ ಏಕೆ?: ನೂರಾರು ವರ್ಷಗಳಿಂದ ಜಾರಿಯಲ್ಲಿರುವ ಹಾಗೂ ಬ್ರಿಟಿಷರ ಕಾನೂನು ವ್ಯವಸ್ಥೆಯನ್ನು ಆಧರಿಸಿ ರಚಿತವಾಗಿರುವ ಕಾಯ್ದೆ ಗಳನ್ನು ಬದಲಾದ ಕಾಲಘಟ್ಟಕ್ಕೆ ಹಾಗೂ ಭಾರತೀಯ ಪರಿಸ್ಥಿತಿಗೆ ತಕ್ಕಂತೆ ಪರಿಷ್ಕರಣೆಮಾಡಬೇಕೆಂದು ಬೇಡಿಕೆ ಇತ್ತು. ಅದಕ್ಕೆ ಪೂರಕವಾಗಿ ಕಾನೂನು ಆಯೋಗ ಹಲವು ಬದಲಾವಣೆಗೆ ಶಿಫಾರಸು ಮಾಡಿತ್ತು. ಹೀಗಾಗಿ ಕಾನೂನುಗಳನ್ನು ಬದಲಿಸಲಾಗಿದೆ ಎಂಬುದು ಕೇಂದ್ರ ಸರ್ಕಾರದ ವಾದ.

 

 

ದೇಶದ ಕ್ರಿಮಿನಲ್‌ ನ್ಯಾಯ ವ್ಯವಸ್ಥೆಗೆ ಹೊಸ ರೂಪ ನೀಡುವ ಉದ್ದೇಶದಿಂದ ರಚಿಸಲಾದ 3 ನೂತನ ಅಪರಾಧ ಮಸೂದೆಗಳಿಗೆ ಲೋಕ ಸಭೆ ಬುಧವಾರ ಧ್ವನಿಮತದಿಂದ ತನ್ನ ಅನುಮೋ ದನೆ ನೀಡಿದೆ. ಪ್ರತಿಪಕ್ಷಗಳ 97 ಸಂಸದರನ್ನು ಲೋಕ ಸಭೆಯಿಂದ ಅಮಾನತು ಮಾಡಲಾಗಿದ್ದು, ಅವರ ಅನುಪಸ್ಥಿತಿಯಲ್ಲೇ ಈ ವಿಧೇಯಕವನ್ನು ಅಂಗೀಕರಿ ಸಲಾಗಿದೆ. ಮಸೂದೆಗೆ ರಾಜ್ಯ ಸಭೆಯ ಅನುಮೋದನೆಯೂ ಸಿಕ್ಕಿ ಅದಕ್ಕೆ ರಾಷ್ಟ್ರಪತಿಗಳ ಸಹಿ ಬಿದ್ದರೆ ಇವು ಕಾನೂನು ರೂಪ ಪಡೆದುಕೊಳ್ಳಲಿವೆ.

ಈವರೆಗೆ ಭಾರತದಲ್ಲಿ ಅಪರಾಧಿಗಳನ್ನು ಶಿಕ್ಷಿಸಲು 163 ವರ್ಷಗಳ ಹಿಂದಿನ ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ- 1860(ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ- 1897 (ಸಿಆರ್‌ಪಿಸಿ) ಹಾಗೂ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್- 1872 ಕಾಯ್ದೆಗಳು ಜಾರಿಯಲ್ಲಿವೆ. ಈ ಕಾಯ್ದೆಗಳನ್ನು ಬದಲಾಯಿಸುವ ಸಲುವಾಗಿ ಕೇಂದ್ರ ಸರ್ಕಾರವು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್- ಐಪಿಸಿಗೆ ಬದಲು), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್ಎಸ್- ಸಿಆರ್‌ಪಿಸಿಗೆ ಬದಲು) ಹಾಗೂ ಭಾರತೀಯ ಸಾಕ್ಷ್ಯ (ಬಿಎಸ್-ಇಂಡಿಯನ್ ಎವಿಡೆನ್ಸ್ ಆ್ಯಕ್ಟ್‌ಗೆ ಬದಲು) ಕಾಯ್ದೆ ರೂಪಿಸಿ ಅದಕ್ಕೆ ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿದೆ. ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ, ಮಾನವ ಕೇಂದ್ರಿತ, ದಂಡದ ಬದಲಾಗಿ ನ್ಯಾಯದಾನ, ತ್ವರಿತ ನ್ಯಾಯ ದಾನದ ಉದ್ದೇಶವನ್ನು ಇವು ಹೊಂದಿವೆ.

3 ಕ್ರಿಮಿನಲ್ ಕಾನೂನು

1 ಭಾರತೀಯ ನ್ಯಾಯ ಸಂಹಿತೆ ಭಾರತೀಯ ದಂಡ ಸಂಹಿತೆ ಅರ್ಥಾತ್ ಐಪಿಸಿಗೆ ಬದಲಾಗಿ

2 ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸಿಆರ್‌ಪಿಸಿ ಎಂದು ಕರೆಯಲಾಗುವ ಅಪರಾಧ ಪ್ರಕ್ರಿಯೆ ಸಂಹಿತೆಗೆ ಪ್ರತಿಯಾಗಿ

3 ಭಾರತೀಯ ಸಾಕ್ಷ್ಯ ಮಸೂದೆ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ ಬದಲಿಗೆ

ಮಸೂದೆಯನ್ನು ಪೂರ್ತಿ ಓದಿದ್ದೇನೆ : ಅಮಿತ್ ಶಾ
ಕರಡು ಮಸೂದೆಯಲ್ಲಿನ ಪ್ರತಿ ಅಲ್ಪವಿರಾಮ ಮತ್ತು ಪೂರ್ಣ ವಿರಾಮಗಳನ್ನು ಕೂಡ ನಾನು ನೋಡಿದ ಬಳಿಕವೇ ಸದನದಲ್ಲಿ ಮಂಡಿಸಲಾಗಿದೆ. ತ್ವರಿತ ನ್ಯಾಯದಾನವು ಇನ್ನು ಸಾಕಾರವಾಗಲಿದೆ. ಪ್ರಕರಣಗಳ ಪದೇ ಪದೇ ಮುಂದೂಡಿಕೆ ಇನ್ನು ಇರಲಾರದು.
* ಅಮಿತ್ ಶಾ, ಕೇಂದ್ರ ಗೃಹ ಸಚಿವ