ಬೆಳ್ವೆ :
ಪರಿಶುದ್ದ ಮನಸ್ಸಿನ ಭಗವಂತನ ಸೇವೆಯಿಂದ ಇಷ್ಟಾರ್ಥ ಪ್ರಾಪ್ತಿಯೊಂದಿಗೆ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಐಶ್ವರ್ಯ ಭಾಗ್ಯಗಳನ್ನು ಪಡೆದು ಸಂತೃಪ್ತಿ ಹೊಂದಲು ಸಾಧ್ಯವಿದೆ ಎಂದು ವೇ.ಮೂ.ಶ್ರೀನಿವಾಸ ಬಾಯರಿ ಮರೂರು ಹೇಳಿದರು. ಅವರು ಬೆಳ್ವೆ ಸಮೀಪದ ಹೆಂಗವಳ್ಳಿ ಗ್ರಾಮದ ಮರೂರು
ಮಂದುಪಾಲ್ ಎಂಬಲ್ಲಿ ಶ್ರೀಮಹಾಮ್ಮಾಯಿ ಕಟ್ಟೆ ಅಮ್ಮನವರ ಟ್ರಸ್ಟ್,(ರಿ.), ಮಂದುಪಾಲ್ ಮರೂರು ವತಿಯಿಂದ ನವೀಕರಣದೊಂದಿಗೆ ಇತ್ತೀಚೆಗೆ ಪುನರ್
ಪ್ರತಿಷ್ಠಾಪನೆಗೊಂಡ ಮರೂರು ಶ್ರೀಮಹಾಮ್ಮಾಯಿ ಕಟ್ಟೆ
ಅಮ್ಮನವರ ಹತ್ರಕಟ್ಟೆ ದೇವಸ್ಥಾನದ ಧಾರ್ಮಿಕ
ಕಾರ್ಯಕ್ರಮದಲ್ಲಿ ಹೇಳಿದರು. ಮರಾಠಿ ಸಮುದಾಯದ ಹಿರಿಯರು ಹಿಂದಿನ ಕಾಲದಿಂದಲೂ ಆರಾಧಿಸಿಕೊಂಡು ಬಂದಿರುವ ಶ್ರೀಮಹಾಮ್ಮಾಯಿ ಕಟ್ಟೆ ಅಮ್ಮನವರ ಹತ್ರಕಟ್ಟೆ ದೇವಸ್ಥಾನವನ್ನು ನವೀಕರಣಗೊಳಿಸಿ ಪುನರ್
ಪ್ರತಿಷ್ಠಾಪನೆಗೊಳಿಸಿರುತ್ತಾರೆ. ಹತ್ರಕಟ್ಟೆ  (ತುಳಸಿಕಟ್ಟೆ) ಇಲ್ಲಿ ಹೋಳಿಹಬ್ಬದ ಆಚರಣೆಯಲ್ಲಿ ಎಲ್ಲರೂ ಸೇರಿಕೊಂಡು ಏಕಾದಶಿಯಂದು ಹತ್ರಕಟ್ಟೆ (ತುಳಸಿಕಟ್ಟೆ)ಯಲ್ಲಿ ಸಿಪ್ಪೆ ತೆಂಗಿನಕಾಯಿ ಇರಿಸಿ
ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾ
ಭಕ್ತಿಯಿಂದ ಪೂಜೆ ಸಲ್ಲಿಸಿ ಹೋಳಿಹಬ್ಬದ ಆಚರಣೆಯನ್ನು ಆರಂಭಿಸಿ ಮೂರು ದಿನಗಳ ಬಳಿಕ ಹುಣ್ಣಿಮೆಯ ದಿನದಂದು ಹೋಳಿ ಹಬ್ಬವನ್ನು ಮುಕ್ತಾಯಗೊಳಿಸುವುದರಿಂದ ಇದು ಅತ್ಯಂತ
ಶ್ರೇಷ್ಠ ಧಾರ್ಮಿಕ ಕೇಂದ್ರವಾಗಿ ಗುರುತಿಸಿಕೊಂಡು
ಧಾರ್ಮಿಕ ನೆಲೆಯಲ್ಲಿ ಪವಿತ್ರ ಸ್ಥಾನವನ್ನು ಹೊಂದಿದೆ. ವಾರ್ಷಿಕ ಪೂಜೆ ಮತ್ತು ಶುಭ ಸಂದರ್ಭಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ ಎಂದರು.

ಗುರಿಕಾರ ತಿಮ್ಮ ನಾಯ್ಕ ಮರೂರು,ಚಂದ್ರ ನಾಯ್ಕ, ಕೂಸ ನಾಯ್ಕ, ಸದಾಶಿವ ನಾಯ್ಕ, ನಾರಾಯಣ ನಾಯ್ಕ, ನಾಗು ನಾಯ್ಕ,ಅಪ್ಪಣ್ಣ ನಾಯ್ಕ,ಪುಟ್ಟ ನಾಯ್ಕ,ಶಂಕರ ನಾಯ್ಕ, ಗಣಪು ನಾಯ್ಕ ಹಾಗೂ ಊರ ಪರವೂರ ಭಕ್ತಾಧಿಗಳು ಪಾಲ್ಗೊಂಡಿದ್ದರು.

ವೇ.ಮೂ.ಅನAತಯ್ಯ ಬಾಯರಿ ಮರೂರು ಹಾಗೂ ಶ್ರೀನಿವಾಸ ಬಾಯರಿ ಮರೂರು ಹಾಗೂ ಸಹ ಅರ್ಚಕ ವೃಂದವರಿAದ ವಿವಿಧ ಧಾರ್ಮಿಕ ಕಾರ್ಯಕ್ರಮಗೊಂದಿಗೆ ಪುನಃ ಪ್ರತಿಷ್ಠೆ, ಬ್ರಹ್ಮ ಕಲಶೋತ್ಸವ,ಪ್ರತಿಷ್ಠಾ ಮಹೋತ್ಸವ ನಡೆಯಿತು.
ದಾನಿಗಳು,ಪ್ರಮುಖರನ್ನು ಗೌರವಿಸಲಾಯಿತು.
ಚಂದ್ರ ನಾಯ್ಕ ಮರೂರು ಸ್ವಾಗತಿಸಿದರು.ಸತೀಶ್ ನಾಯ್ಕ ಸಳ್ಳೇಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಆನಂದ ನಾಯ್ಕ ಮರೂರು ವಂದಿಸಿದರು.

ಬೆಳ್ವೆ ಸಮೀಪದ ಹೆಂಗವಳ್ಳಿ ಗ್ರಾಮದ ಮರೂರು
ಮಂದುಪಾಲ್ ಎಂಬಲ್ಲಿ ಶ್ರೀಮಹಾಮ್ಮಾಯಿ ಕಟ್ಟೆ ಅಮ್ಮನವರ ಟ್ರಸ್ಟ್,(ರಿ.), ಮಂದುಪಾಲ್ ಮರೂರು ವತಿಯಿಂದ ನವೀಕರಣದೊAದಿಗೆ ಇತ್ತೀಚೆಗೆ ಪುನರ್
ಪ್ರತಿಷ್ಠಾಪನೆಗೊಂಡ ಮರೂರು ಶ್ರೀಮಹಾಮ್ಮಾಯಿ ಕಟ್ಟೆ
ಅಮ್ಮನವರ ಹತ್ರಕಟ್ಟೆ ದೇವಸ್ಥಾನದ ಧಾರ್ಮಿಕ
ಕಾರ್ಯಕ್ರಮದಲ್ಲಿ ವೇ.ಮೂ.ಶ್ರೀನಿವಾಸ ಬಾಯರಿ ಮರೂರು ಆರ್ಶಿವರ್ಚಿಸಿದರು. ವೇ.ಮೂ.ಅನಂತಯ್ಯ ಬಾಯರಿ ಮರೂರು, ಗುರಿಕಾರ ತಿಮ್ಮ ನಾಯ್ಕ ಮರೂರು, ಹಾಗೂ ಊರ ಪರವೂರ ಭಕ್ತಾಧಿಗಳು
ಪಾಲ್ಗೋಂಡಿದ್ದರು